ಪಕ್ಷಾಂತರಿ ಸಿದ್ದರಾಮಯ್ಯ ಹಿಂದೊಮ್ಮೆ ಬಿಜೆಪಿ ಬೆಂಬಲಿತ ಸರ್ಕಾರದಿಂದಲೂ ಫಲ ಉಂಡಿದ್ದರು: ಆರ್ ಅಶೋಕ, ಬಿಜೆಪಿ ಶಾಸಕ
ಹಿಂದೆ ತಮ್ಮ ತವರು ಕ್ಷೇತ್ರ ಮೈಸೂರಿಂದಲೇ ಬಹಳ ಕಷ್ಟಪಟ್ಟು ಗೆದ್ದಿದ್ದ ಸಿದ್ದರಾಮಯ್ಯ ಈಗ ಚುನಾವಣೆ ನಡೆದರೂ ಸೋಲುವುದು ಗ್ಯಾರಂಟಿ ಎಂದ ಅಶೋಕ; ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗೋದನ್ನು ಯಾರಿಂದಲೂ ತಪ್ಪಿಸಲಾಗದು ಎಂದರು.
ಮೈಸೂರು: ಪ್ರಪಂಚದಲ್ಲೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಬಗ್ಗೆ ಕಾಮೆಂಟ್ ಮಾಡುವ ನೈತಿಕ ಅಧಿಕಾರ ಸಿದ್ದರಾಮಯ್ಯನವರಿಗಿಲ್ಲ (Siddaramaiah) ಎಂದು ಬಿಜೆಪಿ ಶಾಸಕ ಆರ್ ಅಶೋಕ (R Ashoka) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ; ಮೊದಲು ಸ್ವತಂತ್ರ (independent) ಅಭ್ಯರ್ಥಿಯಾಗಿ ರಾಜಕೀಯಕ್ಕೆ ಬಂದು ಅದ್ಯಾವುದೊ ಸಮಾಜವಾದ ಪಕ್ಷ ಸೇರಿ, ನಂತರ ಜೆಡಿಎಸ್ ಗೆ ಬಂದು ಈಗ ಕಾಂಗ್ರೆಸ್ ನಲ್ಲಿದ್ದಾರೆ, ಮುಂದೆ ಯಾವ ಪಕ್ಷದ ಕಡೆ ವಾಲುತ್ತಾರೋ ಗೊತ್ತಿಲ್ಲ ಎಂದರು. ಹಿಂದೆ ಬಿಜೆಪಿ ಬೆಂಬಲಿತ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಿಜೆಪಿಯಿಂದಲೂ ಫಲ ಉಂಡಿದ್ದಾರೆ, ಅಧಿಕಾರ ಸಿಗುವ ಕಡೆ ಹೋಗುವ ಜಾಯಮಾನ ಅವರದ್ದು ಎಂದು ಬಿಜೆಪಿ ಶಾಸಕ ಹೇಳಿದರು. ಹಿಂದೆ ತಮ್ಮ ತವರು ಕ್ಷೇತ್ರ ಮೈಸೂರಿಂದಲೇ ಬಹಳ ಕಷ್ಟಪಟ್ಟು ಗೆದ್ದಿದ್ದ ಸಿದ್ದರಾಮಯ್ಯ ಈಗ ಚುನಾವಣೆ ನಡೆದರೂ ಸೋಲುವುದು ಗ್ಯಾರಂಟಿ ಎಂದ ಅಶೋಕ; ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗೋದನ್ನು ಯಾರಿಂದಲೂ ತಪ್ಪಿಸಲಾಗದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

