ಗುತ್ತಿಗೆ ಆಧಾರದಲ್ಲಿದ್ದ ಯುವತಿಯರಿಗೆ ‘ಮುತ್ತಿಗೆ’ ಹಾಕ್ತಾನೆ ಡಾಕ್ಟರ್! ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ ಸ್ತ್ರೀಲೋಲ ವೈದ್ಯನ ಲವ್ವಿಡವ್ವಿ!

| Updated By: preethi shettigar

Updated on: Nov 26, 2021 | 11:32 AM

ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ವರದಿಯಂತೆ ಡಾಕ್ಟರ್ ರತ್ನಾಕರ್ ಸಸ್ಪೆಂಡ್ ಆಗಿದ್ದರು. ಆದರೆ ಸರ್ಕಾರದ ಆದೇಶಕ್ಕೆ ಸ್ಟೇ ತಂದು ಮತ್ತೆ ಅದೇ ಕೃತ್ಯ ಮುಂದುವರಿಸುತ್ತಿದ್ದಾನೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದವನಾದ ರತ್ನಾಕರ್, ಮಂಗಳೂರಿನ ದೇರಳಕಟ್ಟೆಯಲ್ಲಿ ವಾಸವಾಗಿದ್ದಾನೆ.

ದಕ್ಷಿಣ ಕನ್ನಡ: ಆರೋಗ್ಯ ಇಲಾಖೆಯ ವೈದ್ಯನೊಬ್ಬನ ರಾಸಲೀಲೆ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಡಾ.ರತ್ನಾಕರ್ ಸಾಕ್ಷಿ ಸಮೇತ ಸಕ್ಕಿಬಿದ್ದಿದ್ದಾನೆ. ಸರ್ಕಾರಿ ಆಸ್ಪತ್ರೆಯ ಆವರಣದ ಕೊಠಡಿಯಲ್ಲಿ ಸರಸ ಸಲ್ಲಾಪವಾಡುವ ರತ್ನಾಕರ್ ತನ್ನ ಮುಖ್ಯಸ್ಥ ಹುದ್ದೆಯನ್ನೇ ಬಂಡಾವಳವಾಗಿಸಿಕೊಂಡಿದ್ದಾನೆ. ತನ್ನ ಅಡಿ ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜತೆ ಸರಸ ಸಲ್ಲಾಪವಾಡುತ್ತಿದ್ದು, ಇದನ್ನು ವಿರೋಧಿಸುವ ಅಥವಾ ದೂರು ಕೊಡಲು ಮುಂದಾಗುವ ಯುವತಿಯರಿಗೆ ಕಿರುಕುಳ ನೀಡಿತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಡಾ. ರತ್ನಾಕರ್ ರಾಸಲೀಲೆಯ ಹಲವು ವಿಡಿಯೋಗಳು ವೈರಲ್ ಆಗಿದೆ.

ಈ ಹಿಂದೆಯೂ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ವರದಿಯಂತೆ ಡಾಕ್ಟರ್ ರತ್ನಾಕರ್ ಸಸ್ಪೆಂಡ್ ಆಗಿದ್ದರು. ಆದರೆ ಸರ್ಕಾರದ ಆದೇಶಕ್ಕೆ ಸ್ಟೇ ತಂದು ಮತ್ತೆ ಅದೇ ಕೃತ್ಯ ಮುಂದುವರಿಸುತ್ತಿದ್ದಾನೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದವನಾದ ರತ್ನಾಕರ್, ಮಂಗಳೂರಿನ ದೇರಳಕಟ್ಟೆಯಲ್ಲಿ ವಾಸವಾಗಿದ್ದಾನೆ. ಕಿರುಕಳ ಪ್ರಕರಣದಲ್ಲಿಯೇ ಭಟ್ಕಳಕ್ಕೆ ವರ್ಗಾವಣೆಯಾಗಿ ಮತ್ತೆ ಈಗ ಮಂಗಳೂರಿಗೇ ಬಂದಿದ್ದಾನೆ.

ಆರೋಗ್ಯ ಇಲಾಖೆ ವೈದ್ಯ ರತ್ನಾಕರ ಸರ್ಕಾರದ ಹಣದಲ್ಲೇ ಕಚೇರಿಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ನಿತ್ಯ ಸಾವಿರಾರು ರೂ. ಮೊತ್ತದ ಚಹಾ, ತಿಂಡಿ ಖರೀದಿ ಮಾಡುತ್ತಿದ್ದ. ಚಹಾ, ತಿಂಡಿ ಹೆಸರಲ್ಲಿ 10 ರಿಂದ 12 ಸಾವಿರ ರೂ. ಬಿಲ್ ಮಾಡುತ್ತಿದ್ದ. ಅಲ್ಲದೇ ಮಾನಸಿಕ ರೋಗಗಳ ವಿಭಾಗದ ಅಧಿಕಾರಿಯಾಗಿದ್ದಾಗ ಕಚೇರಿಯ ‌ಮಹಿಳಾ ಸಿಬ್ಬಂದಿಗೆ ಭರ್ಜರಿ ಬಾಡೂಟ ಕೊಡಿಸುತ್ತಿದ್ದ.

ಇದನ್ನೂ ಓದಿ:

ಪೋಕ್ಸೊ ಕಾಯ್ದೆಯಡಿಯಲ್ಲಿ ಮುಖ ಮೈಥುನ ಗಂಭೀರ ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್

ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಿನ್ಸಿಪಾಲ್ ಸಸ್ಪೆಂಡ್

Published on: Nov 26, 2021 09:25 AM