ಟಿವಿ9 ನೆಟ್ ವರ್ಕ್ ಪ್ರಾಯೋಜಿತ ಫೆಸ್ಟಿವಲ್ ಆಫ್ ಇಂಡಿಯ ಉತ್ಸವಕ್ಕೆ ಚಾಲನೆ ನೀಡಿದ ಸಂಸ್ಥೆಯ ಸಿಇಒ ಬರುನ್ ದಾಸ್
ಪೂಜೆಯ ಬಳಿಕ ಮಾತಾಡಿದ ಬರುನ್ ದಾಸ್, ಮೊದಲಬಾರಿಗೆ ಕೊಲ್ಕತ್ತಾದ ವಿಶ್ವವಿಖ್ಯಾತ ದುರ್ಗಾಪೂಜೆಯನ್ನು ದೆಹಲಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಅಕ್ಟೋಬರ್ 20ರಿಂದ ಆರಂಭವಾಗಿರುವ ಫೆಸ್ಟಿವಲ್ ಆಫ್ ಇಂಡಿಯ ಅಕ್ಟೋಬರ್ 24ರವರೆಗೆ ನಡೆಯಲಿದೆ.
ದೆಹಲಿ: ಟಿವಿ9 ನೆಟ್ ವರ್ಕ್ ಪ್ರಾಯೋಜಿಸುತ್ತಿರುವ ಫೆಸ್ಟಿವಲ್ ಆಫ್ ಇಂಡಿಯದ ಆಯೋಜನೆ ಶುಕ್ರವಾರದಿಂದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಕಾರ್ಯಕ್ರಮವನ್ನು ಟಿವಿ9 ನೆಟ್ ವರ್ಕ್ ಸಿಇಓ ಮತ್ತು ಎಂಡಿ ಬರುನ್ ದಾಸ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ದೇಶ ಮತ್ತು ವಿದೇಶೀ ಮೂಲದ ಅನೇಕ ಮಳಿಗೆಗಳನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಜನ ಖರೀದಿಗಳಿಗಾಗಿ ಕ್ರೀಡಾಂಗಣಕ್ಕೆ ದೌಡಾಯಿಸುತ್ತಿದ್ದಾರೆ. ವಿಶ್ವದ ಹಲವಾರು ದೇಶಗಳ ನಾನಾ ಪ್ರಕಾರದ ವಸ್ತುಗಳನ್ನು ಇಲ್ಲಿ ಕಾಣಬಹುದು. ಶಕ್ತಿದೇವತೆ ದುರ್ಗಾದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೂಜೆಯ ಬಳಿಕ ಮಾತಾಡಿದ ಬರುನ್ ದಾಸ್, ಮೊದಲಬಾರಿಗೆ ಕೊಲ್ಕತ್ತಾದ ವಿಶ್ವವಿಖ್ಯಾತ ದುರ್ಗಾಪೂಜೆಯನ್ನು ದೆಹಲಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಅಕ್ಟೋಬರ್ 20ರಿಂದ ಆರಂಭವಾಗಿರುವ ಫೆಸ್ಟಿವಲ್ ಆಫ್ ಇಂಡಿಯ ಅಕ್ಟೋಬರ್ 24ರವರೆಗೆ ನಡೆಯಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

