TV9 kannada Digital Live: ಸಿದ್ದರಾಮೋತ್ಸವಕ್ಕೆ ಡಿಕೆ ಬ್ರದರ್ಸ್ ಅಪಸ್ವರ, ಇಬ್ಭಾಗ ಆಗುತ್ತಾ ಕಾಂಗ್ರೆಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 14, 2022 | 3:49 PM

ಸಿದ್ದರಾಮೋತ್ಸವದ ಬಗ್ಗೆ  ಡಿಕೆ ಬ್ರದರ್ಸ್  ಅಪಸ್ವರ ಎತ್ತಿದ್ದಾರೆ, ಈ ಅಪಸ್ವರ ಕಾಂಗ್ರೆಸ್  ಇಬ್ಭಾಗಕ್ಕೆ ಕಾರಣವಾಗಬಹುದ ಎಂಬುದರ ಬಗ್ಗೆ ನಿಮ್ಮ ಟಿವಿ ಕನ್ನಡ ಡಿಜಿಟಲ್ ಲೈವ್ ನಲ್ಲಿ  ಚರ್ಚೆ ನಡೆಯುತ್ತಿದೆ.

ಸಿದ್ದರಾಮೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಪರ- ವಿರೋಧ ಚರ್ಚೆಗಳು ನಡೆಯುತ್ತಿದೆ. ಸಿದ್ಧರಾಮಯ್ಯವರನ್ನು ಮುಂದಿನ ಸಿಎಂ ಎಂದು ಈಗಾಗಲ್ಲೇ ಅವರ ಬೆಂಬಲಿಗರು ಹೇಳುತ್ತುದ್ದಾರೆ. ಇದೀಗ ಇದಕ್ಕೆ ಮತ್ತಷ್ಟು ಬಲ ನೀಡುವಂತೆ ಸಿದ್ದರಾಮೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸಿದ್ದರಾಮೋತ್ಸವದ ಮೂಲ ಉದ್ಧೇಶವೇ ಸಿದ್ದರಾಮಯ್ಯನಿಗೆ ಸಿಎಂ ಪಟ್ಟ ಕಟ್ಟುವ ಯೋಜನೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿದ್ದರಾಮೋತ್ಸವ  ಡಿಕೆ ಬ್ರದರ್ಸ್ ದೊಡ್ಡ ಕಂಟಕವಾಗಿ ಕಾಡುತ್ತಿದೆ. ಸಿದ್ದರಾಮೋತ್ಸವದ ಬಗ್ಗೆ  ಡಿಕೆ ಬ್ರದರ್ಸ್  ಅಪಸ್ವರ ಎತ್ತಿದ್ದಾರೆ, ಈ ಅಪಸ್ವರ ಕಾಂಗ್ರೆಸ್  ಇಬ್ಭಾಗಕ್ಕೆ ಕಾರಣವಾಗಬಹುದ ಎಂಬುದರ ಬಗ್ಗೆ ನಿಮ್ಮ ಟಿವಿ ಕನ್ನಡ ಡಿಜಿಟಲ್ ಲೈವ್ ನಲ್ಲಿ  ಚರ್ಚೆ ನಡೆಯುತ್ತಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವವನ್ನು ಆಚರಿಸಲು ಅವರ ಅಭಿಮಾನಿಗಳು, ಬೆಂಬಲಿಗರು ನಿರ್ಧರಿಸಿದ್ದಾರೆ. ಸಿದ್ದರಾಮೋತ್ಸವಕ್ಕೆ ಡಿಕೆ ಶಿವಕುಮಾರ್ ಬೆಂಬಲಿಗರು ಟಕ್ಕರ್ ನೀಡಿದ್ದು, ಶಿವಕುಮಾರೋತ್ಸವ ಮಾಡುವಂತೆ ಡಿಕೆ ಶಿವಕುಮಾರ್ ಬೆಂಬಲಿಗರು ಸಿದ್ದರಾಮಯ್ಯಗೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಇಂದಿನ ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಗಿದೆ.

Published on: Jul 14, 2022 03:46 PM