ನನ್ನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಜನ ಸೇರಲಿರುವುದು ಬಿಜೆಪಿಯವರಿಗೆ ಭಯ ಹುಟ್ಟಿಕೊಂಡಿದೆ: ಸಿದ್ದರಾಮಯ್ಯ
ನನ್ನ ಹುಟ್ಟುಹಬ್ಬ ಆಚರಣೆ ಸಿದ್ರಾಮೋತ್ಸವ ಅನ್ನೋದು ಮಾಧ್ಯಮದವರ ಸೃಷ್ಟಿ, ಅಸಲಿಗೆ ಅದು ಸಿದ್ದರಾಮಯ್ಯ 75: ಅಮೃತೋತ್ಸವ ಎಂದು ಅವರು ಹೇಳಿದರು.
ಕಲಬುರಗಿ: ತಮ್ಮ ಹುಟ್ಟುಹಬ್ಬಕ್ಕೆ ಲಕ್ಷಾಂತರ ಜನ ಸೇರುತ್ತಾರೆ, ಹಾಗಾಗೇ ಬಿಜೆಪಿಯವರಿಗೆ ಭಯ ಹುಟ್ಟಿಕೊಂಡಿದೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದರು. ಬುಧವಾರ ಕಲಬುರಗಿಯಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬಿಜೆಪಿ ಪಕ್ಷದವರು ಸಹ ಬಿ ಎಸ್ ಯಡಿಯೂರಪ್ಪನವರ (BS Yediyurappa) 77ನೇ ಜನ್ಮದಿನೋತ್ಸವ ಆಚರಿಸಿದಾಗ ಅದು ಸರ್ಕಾರೀ ಕಾರ್ಯಕ್ರಮ ಅಲ್ಲವಾಗಿದ್ದರಿಂದ ನಾನೂ ಸಹ ಹೋಗಿದ್ದೆ. ಅವರದ್ದಾದರೆ ಸರಿ ನಮ್ಮದಾದರೆ ತಪ್ಪಾ ಎಂದು ಸಿದ್ದರಾಮಯ್ಯ ಕೇಳಿದರು. ನನ್ನ ಹುಟ್ಟುಹಬ್ಬ ಆಚರಣೆ ಸಿದ್ರಾಮೋತ್ಸವ ಅನ್ನೋದು ಮಾಧ್ಯಮದವರ ಸೃಷ್ಟಿ, ಅಸಲಿಗೆ ಅದು ಸಿದ್ದರಾಮಯ್ಯ 75: ಅಮೃತೋತ್ಸವ ಎಂದು ಅವರು ಹೇಳಿದರು.
ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್
Latest Videos