ನಾನು ಸಿಎಮ್ ಆಗಿದ್ದಾಗಲೂ ಪಿಎಸ್ಐ ನೇಮಕಾತಿಯಲ್ಲಿ ಹಗರಣ ನಡೆದಿದ್ದರೆ ಆಗ್ಯಾಕೆ ಅಶ್ವಥ್ ನಾರಾಯಣ ಮೌನವಾಗಿದ್ದರು? ಸಿದ್ದರಾಮಯ್ಯ
ನಾನು ಮುಖ್ಯಮಂತ್ರಿಯಾಗಿದ್ದಾಗ ಹಗರಣ ನಡೆದಿದ್ದರೆ, ಆಗ ವಿರೋಧಪಕ್ಷದಲ್ಲಿದ್ದ ಅಶ್ಥಥ್ ನಾರಾಯಣ ಕಡುಬು ತಿಂತಿದ್ನಾ ಇಲ್ಲ ಕಳ್ಳೆಪುರಿ ತಿಂತಿದ್ನಾ ಅಂತ ಪ್ರಶ್ನಿಸಿದರು.
ಕಲಬುರಗಿ: ಪಿಎಸ್ ಐ ನೇಮಕಾತಿ ಹಗರಣದ (PSI Recruitment Scam) ರೂವಾರಿಯೇ ಸಿದ್ದರಾಮಯ್ಯ (Siddaramaiah), ಅವರು ಮುಖ್ಯಮಂತ್ರಿಗಳಾಗಿದ್ದಾಗಲೂ ಹಗರಣ ನಡೆದಿತ್ತು ಎಂದು ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಆರೋಪಿಸಿದ್ದಾರೆಂದು ಕಲಬುರಗಿ ಪ್ರವಾಸದಲ್ಲಿರುವ ವಿರೋಧ ಪಕ್ಷದ ನಾಯಕರಿಗೆ ಅಲ್ಲಿನ ಪತ್ರಕರ್ತರು ಕೇಳಿದಾಗ, ನಾನು ಮುಖ್ಯಮಂತ್ರಿಯಾಗಿದ್ದಾಗ ಹಗರಣ ನಡೆದಿದ್ದರೆ, ಆಗ ವಿರೋಧಪಕ್ಷದಲ್ಲಿದ್ದ ಅಶ್ಥಥ್ ನಾರಾಯಣ ಕಡುಬು ತಿಂತಿದ್ನಾ ಇಲ್ಲ ಕಳ್ಳೆಪುರಿ ತಿಂತಿದ್ನಾ ಅಂತ ಪ್ರಶ್ನಿಸಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ವಿಷಯ ಎತ್ತಬಹುದಾಗಿತ್ತಲ್ಲ ಅಂತ ಅವರು ಹೇಳಿದರು.
Latest Videos