AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Network ನ್ಯೂಸ್ ಡೈರೆಕ್ಟರ್ ಹೇಮಂತ್ ಶರ್ಮಾರಿಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್‌

TV9 Network ನ್ಯೂಸ್ ಡೈರೆಕ್ಟರ್ ಹೇಮಂತ್ ಶರ್ಮಾರಿಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್‌

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Nov 17, 2025 | 11:14 PM

Share

ಟಿವಿ9 ನ್ಯೂಸ್ ನೆಟ್ ವರ್ಕ್ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ TV9 Network ನ್ಯೂಸ್ ಡೈರೆಕ್ಟರ್ ಹೇಮಂತ್ ಶರ್ಮಾ ಅವರಿಗೆ ಒನ್‌ ವರ್ಲ್ಡ್‌ ಒನ್ ಫ್ಯಾಮಿಲಿ- ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ನೀಡಿ ಗೌರವಿಸಲಾಯಿತು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಂತ್ ಶರ್ಮಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿಕ್ಕಬಳ್ಳಾಪುರ, ನವೆಂಬರ್ 17): ಟಿವಿ9 ನ್ಯೂಸ್ ನೆಟ್ ವರ್ಕ್ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ TV9 Network ನ್ಯೂಸ್ ಡೈರೆಕ್ಟರ್ ಹೇಮಂತ್ ಶರ್ಮಾ ಅವರಿಗೆ ಒನ್‌ ವರ್ಲ್ಡ್‌ ಒನ್ ಫ್ಯಾಮಿಲಿ- ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ನೀಡಿ ಗೌರವಿಸಲಾಯಿತು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಂತ್ ಶರ್ಮಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಟ್ಟಪರ್ತಿ ಸತ್ಯಸಾಯಿ ಬಾಬಾರ ಅನುಯಾಯಿ ಸದ್ಗುರು ಶ್ರೀ ಮಧುಸೂದನ ಸಾಯಿ ರವರು ಹೇಮಂತ್ ಶರ್ಮ್ ರಿಗೆ ಮೀಡಿಯಾ ಅಂಡ್ ಜರ್ನಲಿಸಮ್ ಎಕ್ಸಲೆನ್ಸ್ ವಿಭಾಗದಲ್ಲಿ ಸಮಾಜಮುಖಿ ಕೆಲಸವನ್ನು ಪ್ರಶಂಸೆ ಮಾಡಿ ಪ್ರಶಸ್ತಿ ನೀಡಿ ಅಭಿನಂದಿಸಿದರು. ಇದೆ ವೇಳೆ ಲಿಟರರಿ ಅಂಡ್ ಅಡ್ವೊಕಸಿ ಇಂಪ್ಯಾಕ್ಟ್’ ವಿಭಾಗದಲ್ಲಿ ಖ್ಯಾತ ವಾಯ್ಸ್ ಓವರ್ ಆರ್ಟಿಸ್ಟ್ ಹರೀಶ್ ಭೀಮಾನಿ, ಲಿಟ್ರರಿ ಅಂಡ್ ಅಡ್ವಕಸಿ ಇಂಪ್ಯಾಕ್ಟ್ ವಿಭಾಗದಲ್ಲಿ ರಸ್ಕಿನ್ ಬಾಂಡ್, ಡಾ ವಿಕ್ರಮ್ ಸಂಪತ್, ಅಮಿಶ್ ತ್ರಿಪಾಠಿ ಅವರಿಗೂ ಒಂದು ಜಗತ್ತು ಒಂದು ಕುಟುಂಬ ‘ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ಪುರಸ್ಕಾರ’ ಘೋಷಿಸಲಾಯಿತು.

ಮಾಧ್ಯಮಗಳ ಕೊಡುಗೆ ಬಹಳ ದೊಡ್ಡದು. ಟಿವಿ9 ಮಾದ್ಯಮ, ಶ್ರೀ ಮಧುಸೂದನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಬಗ್ಗೆ ಸಕರಾತ್ಮಕ ಸುದ್ದಿ ಪ್ರಸಾರ ಮಾಡಿದ ಕಾರಣ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಹಲವು ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮಧುಸೂದನ್ ಸಾಯಿ ಅಭಿಪ್ರಾಯಪಟ್ಟರು.

ಇನ್ನು ಈ ಕಾರ್ಯಕ್ರಮದಲ್ಲಿ ಟಿವಿ9 ಕನ್ನಡ ಸುದ್ದಿವಾಹಿನಿ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಚೌಧರಿ, ಟಿವಿ9 ಕನ್ನಡ ಸುದ್ದಿವಾಹಿನಿ ತಾಂತ್ರಿಕ ಮುಖ್ಯಸ್ಥ ಶ್ರೀಕಾಂತ್ ಎಂ, ಟಿವಿ9 ಕನ್ನಡ ಸುದ್ದಿವಾಹಿನಿ ಇನ್ ಪುಟ್ ಮುಖ್ಯಸ್ಥರಾದ ವಿಲಾಸ್ ನಾದೋಡ್ಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.