ಕಾನ್ಫಿಡೆಂಟ್ ಗ್ರೂಪ್‌ನ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ಟಿಎ ಜೋಸೆಫ್ ದೂರು: ಕಂಪ್ಲೇಂಟ್ನಲ್ಲಿದೆ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಐಟಿ ದಾಳಿ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯ್ ಸಹೋದರ ಬಾಬು, ಐಟಿ ಅಧಿಕಾರಿಗಳಿಂದ ಕಿರುಕುಳವಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ, ಎಂಡಿ ಟಿಎ ಜೋಸೆಫ್ ದೂರಿನಲ್ಲಿ ಐಟಿ ಅಧಿಕಾರಿಗಳ ಮೇಲೆ ಆರೋಪ ಮಾಡದೆ, ಆತ್ಮಹತ್ಯೆಗೆ ಕಾರಣವಾದ ಒತ್ತಡಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು, ಜನವರಿ 31: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಇತ್ತೀಚೆಗೆ ಐಟಿ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅಶೋಕ್ ನಗರ ಪೊಲೀಸರಿಗೆ ಕಾನ್ಫಿಡೆಂಟ್ ಗ್ರೂಪ್‌ನ ಎಂಡಿ ಟಿಎ ಜೋಸೆಫ್ ದೂರು ದಾಖಲಿಸಿದ್ದಾರೆ. ಜೋಸೆಫ್ ತಮ್ಮ ದೂರಿನಲ್ಲಿ, ರಾಯ್ ಆತ್ಮಹತ್ಯೆಗೆ ಕಾರಣವಾದ ಒತ್ತಡಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಐಟಿ ಅಧಿಕಾರಿಗಳ ಮೇಲೆ ಯಾವುದೇ ನೇರ ಆರೋಪ ಮಾಡಿಲ್ಲ.
ಸಮಗ್ರ ತನಿಖೆ ನಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜೋಸೆಫ್ ಆಗ್ರಹಿಸಿದ್ದಾರೆ. ಆದಾಗ್ಯೂ, ಸಿಜೆ ರಾಯ್ ಅವರ ಸಹೋದರ ಬಾಬು ಅವರು ಮಾತನಾಡಿ, ರಾಯ್ ಕಳೆದ ಕೆಲವು ದಿನಗಳಿಂದ ಐಟಿ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬಸ್ಥರು ಪ್ರತ್ಯೇಕ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಬಾಬು ತಿಳಿಸಿದ್ದಾರೆ.
