ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು, ಭಯಾನಕ ವಿಡಿಯೋ

ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು, ಭಯಾನಕ ವಿಡಿಯೋ

ನಯನಾ ರಾಜೀವ್
|

Updated on: Oct 21, 2024 | 12:23 PM

ತಮಿಳುನಾಡಿನ ಸೇಲಂನಲ್ಲಿ ಸಂಭವಿಸಿದ ರಸ್ತೆ ಅಪಘಾತ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ವೆಲ್ಲಲಗುಂಡಂ ಬಳಿ ಸೇಲಂ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಖಾಸಗಿ ಬಸ್ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಸಂಭವಿಸಿದಾಗ ಸುಮಾರು 50 ಮಂದಿ ಪ್ರಯಾಣಿಕರಿದ್ದರು.

ಮಾರಣಾಂತಿಕ ಅಪಘಾತವು ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾಸಗಿ ಬಸ್ ಅತ್ತೂರಿನಿಂದ ಸೇಲಂಗೆ ಹೋಗುತ್ತಿತ್ತು, ಈ ಬಸ್ ಸೇಲಂ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದಾಗ, ವೆಳ್ಳಾಲಗುಂಡಂ ಲಿಂಕ್ ರಸ್ತೆಯಿಂದ ಮತ್ತೊಂದು ಬಸ್ ಹಠಾತ್ ಬಲಕ್ಕೆ ಬಂದು ಡಿಕ್ಕಿ ಹೊಡೆದಿದೆ.

ಮೊದಲ ಬಸ್ಸಿನ ಚಾಲಕ ಸಕಾಲಕ್ಕೆ ಬ್ರೇಕ್ ಹಾಕಿದ್ದರಿಂದ ಡಿಕ್ಕಿಯ ತೀವ್ರತೆ ಕಡಿಮೆಯಾಯಿತು. ಸ್ಕಿಡ್ ಆಗುತ್ತಿರುವಾಗ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬೈಕ್ ಸವಾರ ಮತ್ತು ಪಿಲಿಯನ್ ರಸ್ತೆಯ ಮೇಲೆ ಬಿದ್ದಿದ್ದಾರೆ ಆದರೆ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ. ಎರಡೂ ಬಸ್‌ಗಳ ಚಾಲಕರು ಮತ್ತು ಸಹಾಯಕ ಗಾಯಗೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ