ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ವಂಚಿಸಿರುವುದು ಚರ್ಚೆಯಾಗಬೇಕು: ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 07, 2022 | 9:28 PM

ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೇಗೆ ಜನರನ್ನು ವಂಚಿಸಿವೆ ಅಂತ ಸದನದಲ್ಲಿ ಚರ್ಚಿಸಬೇಕಿದೆ ಆ ಕೆಲಸ ತಾನು ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.

ನಾವು ಇದನ್ನು ಹೇಳುತ್ತಲೇ ಇದ್ದೇವೆ. ಮೇಕೆದಾಟು ಯೋಜನೆಗಾಗಿ (Mekedatu Project) ಕಾಂಗ್ರೆಸ್ ನಡೆಸಿದ ಪಾದಯಾತ್ರೆ ಬಗ್ಗೆ ಚರ್ಚೆಗಳು ಮುಗಿಯುತ್ತಿಲ್ಲ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಚಿಕ್ಕಬಳ್ಳಾಪುದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ(ಎಸ್) ಧುರೀಣ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ನೀಡಿದ ಹೇಳಿಕೆಗಳನ್ನು ಟೀಕಿಸುತ್ತಿದ್ದರೆ, ಇತ್ತ ರಾಮನಗರದಲ್ಲಿ ಕುಮಾರಣ್ಣ ಸಹ ಕಾಂಗ್ರೆಸ್ ನಾಯಕ ಮತ್ತು ಅವರ ಪಾದಯಾತ್ರೆಯನ್ನು ಗೇಲಿ ಮಾಡಿದರು. ಕುಮಾರಸ್ವಾಮಿಯವರು ಮಾಡಿದ ಟೀಕೆಗಳಿಗೆ ಜನ ಛೀ ಥೂ ಅನ್ನುತ್ತಿದ್ದಾರೆ ಅಂತ ಶಿವಕುಮಾರ ಹೇಳಿದ್ದಾರೆ ಎಂದು ಅವರಿಗೆ ಮಾಧ್ಯಮದವರು ಹೇಳಿದಾಗ ಕೆರಳಿದ ಮಾಜಿ ಮುಖ್ಯಮಂತ್ರಿಗಳು, ಛೀ ಥೂ ಅನ್ನುವಂಥ ಯಾವುದೇ ಕೆಲಸ ನಾನು ಮಾಡಿಲ್ಲ ಎಂದು ಹೇಳಿದರು. ತಮ್ಮ ಸುತ್ತ ನೆರೆದಿದ್ದ ಜನರನ್ನು ತೋರಿಸಿ ಇವರೆಲ್ಲ ಛೀ ಥೂ ಅನ್ನಲು ಬಂದಿದ್ದಾರೆಯೇ? ರವಿವಾರ ಅಫ್ಜಲಪುರನಲ್ಲಿ ಸಾವಿರಾರು ಜನ ಸೇರಿದ್ದರು, ಅವರ್ಯಾರೂ ಛೀ ಥೂ ಅನ್ನಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

10 ದಿನಗಳ ಭೂರಿ ಭೋಜನ ಮೆಲ್ಲುತ್ತಾ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಿಂದ ಯಾವ ಸಾಧನೆಯೂ ಅಗಿಲ್ಲ ಎಂದ ಕುಮಾರಸ್ವಾಮಿಯವರು, ಸರ್ಕಾರ ಮೇಕೆದಾಟು ಯೋಜನೆಗಾಗಿ ರೂ. 1,000 ಕೋಟಿ ಘೋಷಿಸಿರುವುದು ಕಾಂಗ್ರೆಸ್ ನಡೆಸಿದ ಪಾದಯಾತ್ರೆಯ ಭಯದಿಂದಲೇ ಹೊರತು ಬೇರೇನೂ ಅಲ್ಲ, ಯೋಜನೆಗೆ ಹಣ ಘೋಷಣೆ ಮಾಡಿದರೆ, ಕೆಲಸ ಆರಂಭಿಸಿದ ಹಾಗಾಯ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೇಗೆ ಜನರನ್ನು ವಂಚಿಸಿವೆ ಅಂತ ಸದನದಲ್ಲಿ ಚರ್ಚಿಸಬೇಕಿದೆ ಆ ಕೆಲಸ ತಾನು ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:   Video: ತನ್ನ ಶಾಲೆಯ ಶಿಕ್ಷಕಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸ್​ ಅಧಿಕಾರಿ ಬಳಿ ಹಠ ಮಾಡಿದ 2ನೇ ಕ್ಲಾಸ್​ ಹುಡುಗ !