ಕಾಂಗ್ರೆಸ್ ಪಾದಯಾತ್ರೆಯನ್ನು ಟೀಕಿಸಿದ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಕ್ಲಿಯರನ್ಸ್ ತರುವೆ ಅನ್ನೋದು ಯಾಕೆ? ಶಿವಕುಮಾರ
ಹಾಗೆಯೇ, ಕಾಂಗ್ರೆಸ್ ಪಾದಯಾತ್ರೆಯಿಂದ ಏನನ್ನೂ ಸಾಧಿಸಲಾಗದು ಎನ್ನುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್ನಲ್ಲಿ ಯೋಜನೆಗೆ 1000 ಕೋಟಿ ರೂ. ಗಳನ್ನು ಯಾಕೆ ಪಕ್ಕಕ್ಕಿರಿಸಿದ್ದಾರೆ ಅಂತ ಶಿವಕುಮಾರ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ (Congress party) ಮೇಕೆದಾಟು ಯೋಜನೆಗಾಗಿ (Mekedatu Project) ನಡೆಸಿದ ಪಾದಯಾತ್ರೆ ಮುಗಿದಿದೆಯಾದರೂ ಯೋಜನೆ ಬಗ್ಗೆ ಚರ್ಚೆ ಸತತವಾಗಿ ಜಾರಿಯಲ್ಲಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ನೀಡಿದ ಹೇಳಿಕೆಗಳನ್ನು ಟೀಕಿಸಿದರು ಮತ್ತು ಅವರ ಜಲಧಾರೆ ಕಾರ್ಯಕ್ರಮ ಏನಾಯಿತು ಅಂತ ಪ್ರಶ್ನಿಸಿದರು. ಅವರ ಕಾರ್ಯಕ್ರಮವನ್ನು ಅಪಹರಿಸುವ ಅನಿವಾರ್ಯತೆ ತಮಗಿಲ್ಲ, ಅವರು ಜಲಧಾರೆ ಬಗ್ಗೆ ಸ್ವಲ್ಪ ವಿವರಣೆ ನೀಡಿದರೆ ಸಾಕು ಎಂದರು. ಅವರ ಈ ಯೋಜನೆ ಮೂಲಕ ಕನ್ನಡಿಗರಿಗೆ ನೀರು ಸಿಗುವುದಾದರೆ, ಕಾಂಗ್ರೆಸ್ ಯೋಜನೆಯನ್ನು ಬೆಂಬಲಿಸುತ್ತದೆ ಎಂದು ಶಿವಕುಮಾರ ಹೇಳಿದರು.
ಹಾಗೆಯೇ, ಕಾಂಗ್ರೆಸ್ ಪಾದಯಾತ್ರೆಯಿಂದ ಏನನ್ನೂ ಸಾಧಿಸಲಾಗದು ಎನ್ನುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್ನಲ್ಲಿ ಯೋಜನೆಗೆ 1000 ಕೋಟಿ ರೂ. ಗಳನ್ನು ಯಾಕೆ ಪಕ್ಕಕ್ಕಿರಿಸಿದ್ದಾರೆ ಅಂತ ಶಿವಕುಮಾರ ಪ್ರಶ್ನಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಕ್ಲೀಯರನ್ಸ್ ತರುವುದಾಗಿ ಯಾಕೆ ಹೇಳಿದರು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರು ಎರಡೂ ಪಕ್ಷಗಳನ್ನು ಮಾತುಕತೆಗೆ ಕರೆಯುತ್ತೇನೆ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಕೋಳಿಯನ್ನು ಕೇಳಿ ಮಸಾಲೆ ಅರೆದಂತೆ ಅಂತ ಹೇಳುವ ಹಾಗೆ ಅವರನ್ನು ಕೇಳಿ ಮುಂದುವರಿಯುವ ಅವಶ್ಯಕತೆ ನಮಗಿಲ್ಲ. ಅವರ ಎದುರುಗೆಡೆಯೇ ಬೊಮ್ಮಾಯಿ ಅವರು ನಮ್ಮ ನೀರು ನಮ್ಮ ಹಕ್ಕು ಅಂತ ಹೇಳಬೇಕಾಗಿತ್ತು, ಎಂದು ಶಿವಕುಮಾರ ಹೇಳಿದರು.
ಮೇಕೆದಾಟು ಯೋಜನೆಯು ಒಂದು ಬ್ಯಾಲೆನ್ಸಿಂಗ್ ಜಲಾಶಯವಾಗಿದೆ. ಅದು ನಮಗೆ ವಿದ್ಯುತ್ ಉತ್ಪಾದಿಸಲು ಮತ್ತು ಬೆಂಗಳೂರು ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುತ್ತದೆ. ಅವರ ಪಕ್ಷದ 25 ಸಂಸದರಿದ್ದಾರೆ, ಅವರನ್ನೆಲ್ಲ ಕರೆದುಕೊಂಡು ಹೋಗಿ ಬೊಮ್ಮಾಯಿ ಅವರು ಮಾತಾಡಲಿ, ಅವರು ಬಯಸಿದರೆ ನಾವೂ ಜೊತೆಗೆ ಹೋಗುತ್ತೇವೆ ಎಂದು ಶಿವಕುಮಾರ ಹೇಳಿದರು. ಕ್ಲಿಯರೆನ್ಸ್ ಪಡೆಯಲು ಸರ್ಕಾರ ಒಂದು ಸಮಯವನ್ನು ನಿಗದಿಪಡಿಸಲಿ, ಅದಾದ ನಿರ್ಮಾಣ ಕಾರ್ಯ ಶುರುಮಾಡಲಿ ಅಂತ ಶಿವಕುಮಾರ ಹೇಳಿದರು.
ಇದನ್ನೂ ಓದಿ: ಕೊರೊನಾ ಹರಡಿದ್ದು -ಟ್ರಾಫಿಕ್ ಜಾಮ್ ಮಾಡಿದ್ದು ಇಷ್ಟೇ ಕಾಂಗ್ರೆಸ್ ಪಾದಯಾತ್ರೆಯ ಸಾಧನೆ: ಸಚಿವ ಕಾರಜೋಳ ವ್ಯಂಗ್ಯ