ಬರ್ತ್​ಡೇ ಅಷ್ಟೇ ಅಲ್ಲ, ಮಾ. 17ಕ್ಕೆ ‘ಜೇಮ್ಸ್​’ ರಿಲೀಸ್​ ಮಾಡಲು ಇದೆ ಮತ್ತೊಂದು ಕಾರಣ; ಏನದು?

ಬರ್ತ್​ಡೇ ಅಷ್ಟೇ ಅಲ್ಲ, ಮಾ. 17ಕ್ಕೆ ‘ಜೇಮ್ಸ್​’ ರಿಲೀಸ್​ ಮಾಡಲು ಇದೆ ಮತ್ತೊಂದು ಕಾರಣ; ಏನದು?

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 07, 2022 | 6:28 PM

ಪುನೀತ್​ ಬರ್ತ್​ಡೇ ಇದೆ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಮಾರ್ಚ್​ 17ರಂದು ರಿಲೀಸ್ ಮಾಡುತ್ತಿಲ್ಲ. ಇದಕ್ಕೆ ಮತ್ತೊಂದು ಕಾರಣವೂ ಇದೆ. ಈ ಬಗ್ಗೆ ನಿರ್ದೇಶಕ ಚೇತನ್​ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ‘

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಪುನೀತ್​ ರಾಜ್​ಕುಮಾರ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇದಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್​ ಆಗಿದ್ದಾರೆ. ಹೀರೋ ಆಗಿ ಕೊನೆಯ ಬಾರಿ ಅವರನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್​ ಕಾದು ಕೂತಿದ್ದಾರೆ. ಪುನೀತ್​ ಬರ್ತ್​ಡೇ ಇದೆ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಮಾರ್ಚ್​ 17ರಂದು ರಿಲೀಸ್ ಮಾಡುತ್ತಿಲ್ಲ. ಇದಕ್ಕೆ ಮತ್ತೊಂದು ಕಾರಣವೂ ಇದೆ. ಈ ಬಗ್ಗೆ ನಿರ್ದೇಶಕ ಚೇತನ್​ ಕುಮಾರ್ (Chetan Kumar) ಮಾಹಿತಿ ಹಂಚಿಕೊಂಡಿದ್ದಾರೆ. ‘ಜೇಮ್ಸ್​’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ಬಿಚ್ಚಿಟ್ಟಿದ್ದಾರೆ. ‘ಜೇಮ್ಸ್​’ ಸಿನಿಮಾವನ್ನು ಮಾರ್ಚ್​ 17ರಂದು ತೆರೆಗೆ ತರೋಕೆ ಪ್ರಯತ್ನಿಸಿ ಎಂದು ಪುನೀತ್ ಅವರು ಆರಂಭದಲ್ಲೇ ಹೇಳಿದ್ದರು. ‘ಜೇಮ್ಸ್​ ರಿಲೀಸ್​ ದಿನಾಂಕ ಪುನೀತ್​ ಬಾಯಿಂದಲೇ ಬಂದಿತ್ತು. ಹೀಗಾಗಿ, ಅದೇ ದಿನ ಸಿನಿಮಾ ತೆರೆಗೆ ತರೋಕೆ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ’ ಎಂದಿದ್ದಾರೆ ಚೇತನ್​ ಕುಮಾರ್.

ಇದನ್ನೂ ಓದಿ: ‘ಪುನೀತ್​ ರೀತಿ ನಾವು ಸ್ಟಂಟ್​ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​

‘ಫ್ಯಾನ್ಸ್​ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್​ ಬಂದಿದ್ದರು ಪುನೀತ್​’: ಆ ಘಟನೆ ನೆನೆದ ಹರ್ಷ