AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾದರೂ ನಮ್ಮ ಸಂಸದರು ಮತ್ತು ಸರ್ಕಾರ ಮೌನ: ಸಿದ್ದರಾಮಯ್ಯ

15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾದರೂ ನಮ್ಮ ಸಂಸದರು ಮತ್ತು ಸರ್ಕಾರ ಮೌನ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 07, 2022 | 8:28 PM

Share

ರಾಜ್ಯಸಭೆಗೆ ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ವರದಿಯ ಶಿಫಾರಸ್ಸಿನ ಪ್ರಕಾರ ಪರಿಹಾರ ನೀಡಲಾಗದು ಅಂತ ಹೇಳಿದಾಕ್ಷಣ ನಮ್ಮ ಸಂಸದರು ಸುಮ್ಮನಾಗಿಬಿಟ್ಟರು ಎಂದು ಸಿದ್ದರಾಮಯ್ಯ ಬಿಜೆಪಿ ಸಂಸದರನ್ನು ಗೇಲಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಹಲವಾರು ಬಾರಿ ಸದನದಲ್ಲಿ ರಾಜ್ಯ ಆಯವ್ಯಯ (budget) ಪತ್ರ ಮಂಡಿಸಿರುವುದರಿಂದ ಹಣಕಾಸಿನ ವಿಷಯಗಳನ್ನು ಅಧಿಕಾರಯುತವಾಗಿ ಮಾತಾಡಬಲ್ಲರು ಮತ್ತು ಮಂಡಿಸಬಲ್ಲರು. ಸೋಮವಾರದಂದು ಅವರು 15 ನೇ ಹಣಕಾಸು ಆಯೋಗದಿಂದ (15th Finance Commission) ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸದನದ ಗಮನಕ್ಕೆ ತಂದರು. ಹಣಕಾಸು ಅಯೋಗದಿಂದ ಬೇರೆ ರಾಜ್ಯಗಳಿಗೂ ಅನ್ಯಾಯವಾಗಿದೆಯೇ, ಅಲ್ಲಿನ ಸ್ಥಿತಿಗತಿ ಹೇಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಳಿದಾಗ ವಿರೋಧ ಪಕ್ಷದ ನಾಯಕರು ಎಲ್ಲ ರಾಜ್ಯಗಳಿಗಿಂತ ಹೆಚ್ಚು ಅನ್ಯಾಯಕ್ಕೊಳಗಾಗಿರುವ ರಾಜ್ಯ ಕರ್ನಾಟಕ ಎಂದು ಹೇಳಿದರು. 2020-21 ರಲ್ಲಿ ಕಾರ್ಯರೂಪಕ್ಕೆ ತರಲಾದ 15 ನೇ ಹಣಕಾಸು ಆಯೋಗ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ನಮ್ಮ ರಾಜ್ಯಕ್ಕೆ 5495 ಕೋಟಿ ರೂ. ಪರಿಹಾರವನ್ನು ಶಿಫಾರಸ್ಸು ಮಾಡಲಾಗಿತ್ತು. ಆದರೆ ಆದೇ ವರ್ಷ ಪ್ರಕಟವಾದ ಅಂತಿಮ ವರದಿಯಲ್ಲಿ ಅದರ ಪ್ರಸ್ತಾಪವೇ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಅಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಕೈ ತಪ್ಪಿಹೋದರೂ ಸರ್ಕಾರ ಸುಮ್ಮನಿತ್ತು. ರಾಜ್ಯ ಸಮಸ್ಯೆ ಎದುರಿಸುವಂಥ ಸ್ಥಿತಿ ಸರ್ಕಾರದ ನಿಷ್ಕೃಯಿತೆಯಿಂದ ತಲೆದೋರಿತು. ಬಿಜೆಪಿಯ 25 ಸಂಸದರು ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಚಕಾರವೆತ್ತದೆ ಹೋಗಿದ್ದು ಯಾಕೆ ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯಸಭೆಗೆ ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ವರದಿಯ ಶಿಫಾರಸ್ಸಿನ ಪ್ರಕಾರ ಪರಿಹಾರ ನೀಡಲಾಗದು ಅಂತ ಹೇಳಿದಾಕ್ಷಣ ನಮ್ಮ ಸಂಸದರು ಸುಮ್ಮನಾಗಿಬಿಟ್ಟರು ಎಂದು ಸಿದ್ದರಾಮಯ್ಯ ಬಿಜೆಪಿ ಸಂಸದರನ್ನು ಗೇಲಿ ಮಾಡಿದರು.

ಯಾವುದೇ ಅಂಕಿ-ಅಂಶವನ್ನು ತಾನು ಹುಟ್ಟಿಸಿಕೊಂಡು ಹೇಳುತ್ತಿಲ್ಲ ಎಲ್ಲವೂ ರೆಕಾರ್ಡ್ನಲ್ಲಿದೆ ಎಂದ ಸಿದ್ದರಾಮಯ್ಯನವರು 14 ನೇ ಹಣಕಾಸು ಆಯೋಗ ಮತ್ತು 15 ನೇ ಹಣಕಾಸು ಆಯೋಗಳನ್ನು ರಾಜ್ಯಕ್ಕೆ ಕೇಂದ್ರದಿಂದ ಸಂದಾಯವಾಬೇಕಿರುವ ತೆರಿಗೆ ಪಾಲಿನ ಹಿನ್ನೆಲೆಯಲ್ಲಿ ಹೋಲಿಸಿ ನೋಡಿದ್ದೇಯಾದರೆ ಅದು ಶೇಕಡಾ 1.07 ಕಡಿಮೆಯಾಗಿದೆ ಎಂದರು.

ಅವರ ವಿಷಯಮಂಡನೆಗೆ ಸ್ಪೀಕರ್ ಕಾಗೇರಿ ಅವರು ತಲೆದೂಗುತ್ತಿದ್ದಿದ್ದು ವಿಡಿಯೋನಲ್ಲಿ ನೋಡಬಹುದು.

ಇದನ್ನೂ ಓದಿ:  Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ