ಹಣವಿಲ್ಲದಿದ್ದರೆ ಜನ ಸಂತೆಗೆ ಹೋಗಲಾರರು, ವಹಿವಾಟು ನಡೆಯದು ಮತ್ತು ತೆರಿಗೆ ಸಂಗ್ರಹವಾಗದು: ಸಿದ್ದರಾಮಯ್ಯ
ಎರಡು ವರ್ಷಗಳ ಅವಧಿಯಲ್ಲಿ ಅವರು ರೂ. 40,000 ಕೋಟಿ ಖರ್ಚು ಮಾಡಿದ್ದಾರೆ ಎಂದ ಸಿದ್ದರಾಮಯ್ಯನವರು, ನಮ್ಮ ಪಕ್ಕದ ಇನ್ನೊಂದು ರಾಜ್ಯ ತಮಿಳುನಾಡು 30,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು. ಇದು ಕೋವಿಡ್ ನಿಮಿತ್ತ ಈ ರಾಜ್ಯಗಳು ಖರ್ಚು ಮಾಡಿರುವುದು ಎನ್ನುವುದನ್ನು ಅವರು ಒತ್ತಿ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯವರು (Siddaramaiah) ಸೋಮವಾರದಂದು ಸದನದಲ್ಲಿ ಭರ್ಜರಿ ಫಾರ್ಮ್ನಲ್ಲಿ ಕಂಡರು ಮಾರಾಯ್ರೇ. ಆಡಳಿತ ಪಕ್ಷವನ್ನು (ruling party) ಪದೇಪದೆ ಇಕ್ಕಟ್ಟಿನಲ್ಲಿ ಸಿಲುಕಿಸಿದರು. ಕೋವಿಡ್-19 ನಿಮಿತ್ತ ಜಾರಿಗೊಳಿಸಲಾದ ಲಾಕ್ಡೌನ್ (lockdown) ನಿಂದಾಗಿ ಕಡಿಮೆ ಜಿ ಎಸ್ ಟಿ (GST) ಸಂಗ್ರಹವಾದ ಬಗ್ಗೆ ಸದನದಲ್ಲಿ ಚರ್ಚೆ ನಡೆದಾಗ ಸಿದ್ದರಾಮಯ್ಯನವರು ಜನರ ಕೈಯಲ್ಲಿ ದುಡ್ಡಿಲ್ಲವೆಂದರೆ ಅವರು ಸಂತೆಗೆ ಹೇಗೆ ಹೋದಾರು ಎಂದು ಕೇಳಿದರು. ಎಲ್ಲವೂ ಬಂದ್ ಆಗಿದ್ದರಿಂದ ಜನರಿಗೆ ಕೆಲಸವಿರಲಿಲ್ಲ, ಹಾಗಾಗಿ ದುಡ್ಡು ಸಹ ಅವರಲ್ಲಿ ಇರಲಿಲ್ಲ. ನಮ್ಮಲ್ಲಿ ಹಣವಿದ್ದರೆ ಮಾತ್ರ ಸಂತೆಗೆ ಹೋಗುತ್ತೇವೆ, ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತೇವೆ, ಅದು ಬಟ್ಟೆಯಾಗಿರಬಹುದು, ದವಸ ಧಾನ್ಯವಾಗಿಬಹುದು, ಎಣ್ಣೆ ಅಥವಾ ಮಾಂಸ-ಯಾವುದೇ ಆಗತ್ಯ ವಸ್ತುವಾಗಿರಬಹುದು. ಜನ ಮಾರ್ಕೆಟ್ ಗೆ ಬಂದಾಗ ವಹಿವಾಟು ನಡೆಯುತ್ತದೆ ಮತ್ತು ಸ್ವಾಭಾಬಿಕವಾಗಿಯೇ ತೆರಿಗೆ ಸಂಗ್ರಹವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಆದರೆ ನಮಗಿಂತ ಬಹಳ ಚಿಕ್ಕ ರಾಜ್ಯವಾಗಿರುವ ಕೇರಳವನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಅವರು ಎರಡು ವರ್ಷ ಅಂದರೆ 2020-21 ಮತ್ತು 2021-22 ರ ಸಾಲಿನಲ್ಲಿ ತಲಾ 20,000 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಂದರೆ ಎರಡು ವರ್ಷಗಳ ಅವಧಿಯಲ್ಲಿ ಅವರು ರೂ. 40,000 ಕೋಟಿ ಖರ್ಚು ಮಾಡಿದ್ದಾರೆ ಎಂದ ಸಿದ್ದರಾಮಯ್ಯನವರು, ನಮ್ಮ ಪಕ್ಕದ ಇನ್ನೊಂದು ರಾಜ್ಯ ತಮಿಳುನಾಡು 30,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು. ಇದು ಕೋವಿಡ್ ನಿಮಿತ್ತ ಈ ರಾಜ್ಯಗಳು ಖರ್ಚು ಮಾಡಿರುವುದು ಎನ್ನುವುದನ್ನು ಅವರು ಒತ್ತಿ ಹೇಳಿದರು.
ಸಿದ್ದರಾಮಯ್ಯನವರು ಮಾತಾಡುವಾಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತದೇಕಚಿತ್ತರಾಗಿ ಕೇಳುತ್ತಿದ್ದರು.
ಇದನ್ನೂ ಓದಿ: 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾದರೂ ನಮ್ಮ ಸಂಸದರು ಮತ್ತು ಸರ್ಕಾರ ಮೌನ: ಸಿದ್ದರಾಮಯ್ಯ