ಸಾಧನೆ ಮಾಡಿದ್ದು ರಾಯಚೂರಿನ ವಿದ್ಯಾರ್ಥಿನಿ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಕರಾವಳಿ ಭಾಗದ ವಿದ್ಯಾರ್ಥಿನಿಯರು!

ಸಾಧನೆ ಮಾಡಿದ್ದು ರಾಯಚೂರಿನ ವಿದ್ಯಾರ್ಥಿನಿ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಕರಾವಳಿ ಭಾಗದ ವಿದ್ಯಾರ್ಥಿನಿಯರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 1:20 AM

ರಾಯಚೂರಿನ ಹಿಜಾಬಿ ಹುಡುಗಿ ಬುಶ್ರಾ ಮತೀನ್ ವಿಟಿಯು ಪರೀಕ್ಷೆಯಲ್ಲಿ 16 ಚಿನ್ನದ ಪದಕಗಳನ್ನು ಪಡೆದಿದ್ದಾಳೆ ಎಂಬ ಸಂದೇಶದೊಂದಿಗೆ ಬುಶ್ರಾ ಅವರ ಸಾಧನೆಯ ಪೇಪರ್ ಕಟ್ಟಿಂಗ್ ಮೊದಲಾದವುಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದಾರೆ.

ಇದೆಲ್ಲ ಬೇಕಿರಲಿಲ್ಲ. ಒಬ್ಬ ವಿದ್ಯಾರ್ಥಿನಿಯ ಮಹತ್ಸಾಧನೆಯನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಮೊದಲು ವಿದ್ಯಾರ್ಥಿನಿಯ ಸಾಧನೆಯನ್ನು ನೋಡೋಣ. ಅವರ ಹೆಸರು, ಬುಶ್ರಾ ಮತೀನ್ (Bushra Mateen) ಮತ್ತು ರಾಯಚೂರಿನ (Raichur) ನಿವಾಸಿಯಾಗಿದ್ದಾರೆ. ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) (VTU) ಬಿಇ (ಸಿವಿಲ್) ವಿದ್ಯಾರ್ಥಿನಿಯಾಗಿರುವ ಬುಶ್ರಾ ಅಸಾಧಾರಣ ಬುದ್ಧಿವಂತ ಹುಡುಗಿ. ಈ ವಿಡಿಯೋದ ದ್ವಿತೀಯಾರ್ಧ ನೋಡಿದರೆ ನಿಮಗೆ ಅವರು ಮಾಡಿರುವ ಸಾಧನೆ ಗೊತ್ತಾಗುತ್ತದೆ. ಹೌದು, ಬುಶ್ರಾ ಅಂತಿಮ ವರ್ಷದ ಪರೀಕ್ಷೆಯಲ್ಲಿ 16 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ! ಮಾರ್ಚ್ 10ರಂದು ನಡೆಯಲಿರುವ ವಿಟಿಯು 21ನೇ ಘಟಿಕೋತ್ಸವದಲ್ಲಿ ಅವ ಕೊರಳಿಗೆ 16 ಚಿನ್ನದ ಪದಕ ಬೀಳಲಿವೆ. ಆವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಬುಶ್ರಾರನ್ನು ಅಭಿನಂದಿಸುತ್ತಿದ್ದಾರೆ, ಇದು ಫ್ಯಾಮಿಲಿ ಮತ್ತು ಗ್ರೂಪ್ ಫೋಟೋ ಸಮಯ!

ಓಕೆ, ವಿಡಿಯೋದ ಮೊದಲ ಭಾಗಕ್ಕೆ ಬರೋಣ. ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು ಬುಶ್ರಾ ಸಾಧನೆಯನ್ನು ಹಿಜಾಬ್ ವಿವಾದಕ್ಕೆ ಎಳೆತಂದಿದ್ದಾರೆ. ಮುಸ್ಲಿಂ ಯುವತಿಯರು ಧರಿಸುವ ಹಿಜಾಬನ್ನು ವಿರೋಧಿಸುವ ಸಂಘಗಳಿಗೆ ಮುಖಭಂಗ. ಈ ಭಯವೇ ಅವರನ್ನು ಕಾಡುತ್ತಿದೆಯಾ? ರಾಯಚೂರಿನ ಹಿಜಾಬಿ ಹುಡುಗಿ ಬುಶ್ರಾ ಮತೀನ್ ವಿಟಿಯು ಪರೀಕ್ಷೆಯಲ್ಲಿ 16 ಚಿನ್ನದ ಪದಕಗಳನ್ನು ಪಡೆದಿದ್ದಾಳೆ ಎಂಬ ಸಂದೇಶದೊಂದಿಗೆ ಬುಶ್ರಾ ಅವರ ಸಾಧನೆಯ ಪೇಪರ್ ಕಟ್ಟಿಂಗ್ ಮೊದಲಾದವುಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದಾರೆ. ಇಬ್ಬರು-ಮೂವರು ಹುಡುಗಿಯರು ಹಿಂದೂಗಳ ವಿರುದ್ಧ ಮಾತಾಡಿರುವ ಆಡಿಯೋ ಕ್ಲಿಪ್ಪಿಂಗ್ ಕೂಡ ಇದೆ.

ಹಿಜಾಬ್ ವಿವಾದ ತಣ್ಣಗಾಗಿರುವ ಈ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತಾ ಅನ್ನೋದು ಇಲ್ಲಿನ ಮೂಲಭೂತ ಪ್ರಶ್ನೆ. ಇವರು ಮಾಡಿರುವ ಕೃತ್ಯದಿಂದ ಬುಶ್ರಾ ಮತ್ತವರ ಕುಟುಂಬದ ಸದಸ್ಯರು ತೀವ್ರವಾಗಿ ಬೇಸರಗೊಂಡಿದ್ದಾರೆ.

ಇದನ್ನೂ ಓದಿ:   ಹಿಜಾಬ್ ಸಂಘರ್ಷ ನಡುವೆ ಹಿಂದೂ ದೇವತೆಗಳ ಚಿತ್ರ ಬಿಡಿಸಿ ಸಾಮರಸ್ಯದ ಸಂದೇಶ ಸಾರಿದ ಮುಸ್ಲಿಂ ಕಲಾವಿದ