AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನೊಂದಿಗೆ ಬೆಂಗಳೂರಿಗೆ ಓಡಿಬಂದಿರುವ ತಮಿಳುನಾಡು ಸಚಿವರೊಬ್ಬರ ಮಗಳಿಗೆ ಕರ್ನಾಟಕ ಸರ್ಕಾರದ ರಕ್ಷಣೆ ಬೇಕಂತೆ

ಪ್ರಿಯಕರನೊಂದಿಗೆ ಬೆಂಗಳೂರಿಗೆ ಓಡಿಬಂದಿರುವ ತಮಿಳುನಾಡು ಸಚಿವರೊಬ್ಬರ ಮಗಳಿಗೆ ಕರ್ನಾಟಕ ಸರ್ಕಾರದ ರಕ್ಷಣೆ ಬೇಕಂತೆ

TV9 Web
| Edited By: |

Updated on: Mar 07, 2022 | 6:00 PM

Share

ಆ ಸಂದರ್ಭದಲ್ಲಿ ಸತೀಶ್ ವಿರುದ್ಧ ಜಯಕಲ್ಯಾಣಿ ತಂದೆ ಅಪಹರಣದ ಕೇಸು ದಾಖಲಿಸಲು ಮುಂದಾಗಿದ್ದರಂತೆ. ಪ್ರಕರಣ ದಾಖಲಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೇಳಿದಾಗ ಶೇಖರ್ ಬಾಬು ಸುಮ್ಮನಾದರಂತೆ.

ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ರಕ್ಷಣೆ ಕೋರಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿರುವ ಈ ಯುವತಿ ಮತ್ತು ಯುವಕನನ್ನು ನೋಡಿ. ಯುವತಿ ಸಾಮಾನ್ಯ ಕುಟುಂಬದವರೇನಲ್ಲ. ಅವರ ತಂದೆ ಶೇಖರ್ ಬಾಬು (Shekhar Babu) ತಮಿಳುನಾಡಿ ಸರ್ಕಾರದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಸಚಿವಾರಾಗಿದ್ದಾರೆ. ಯುವತಿಯ ಹೆಸರು ಜಯಕಲ್ಯಾಣಿ (Jayakalyani) ಮತ್ತು ಯುವಕನ ಹೆಸರು ಸತೀಶ್ (Satish). ತಾವಿಬ್ಬರೂ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮೂರು ದಿನಗಳ ಹಿಂದೂ ವಿವಾಹ ಕಾಯ್ದೆ ಅನುಗುಣವಾಗಿ ಮದುವೆಯೂ ಅಗಿದ್ದಾರೆ. ತಾವಿಬ್ಬರೂ ವಯಸ್ಕರಾಗಿದ್ದು (ಜಯಕಲ್ಯಾಣಿ 24, ಸತೀಶ್ 27ರ ಪ್ರಾಯ) ನಮ್ಮ ಸ್ವಇಚ್ಛೆ ಮೇರೆಗೆ ಮನೆಯಿಂದ ಆಚೆ ಬಂದು ಮದುವೆಯಾಗಿರುವುದಾಗಿ ಹೇಳುತ್ತಿದ್ದಾರೆ.

ಅಸಲಿಗೆ ಇವರ ಪ್ರೀತಿ ಮತ್ತು ಮದುವೆಗೆ ತಂದೆಯ ತೀವ್ರ ವಿರೋಧವಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಮನೆಯಿಂದ ಪುಣೆಗೆ ಪಲಾಯನ ಮಾಡಿದ್ದರಂತೆ. ಆದರೆ ಅವರ ತಂದೆಯ ಜನ ಅವರನ್ನು ಪತ್ತೆ ಮಾಡಿ ಮನೆಗೆ ಕರೆತಂದಿದ್ದರು. ನಂತರ ಸತೀಶ್ ರನ್ನು ತಿರುವಲ್ಲೂರ್ ನಲ್ಲಿ ಎರಡು ತಿಂಗಳು ಕಾಲ ಅಕ್ರಮ ಬಂಧನದಲ್ಲಿರಿಸಿ ಥಳಿಸಲಾಗಿತ್ತು ಮತ್ತು ಅವರು ಕುಟುಂಬವರಿಗೂ ವಿಪರೀತ ಕಿರುಕುಳ ನೀಡಲಾಗಿತ್ತು ಎಂದು ಜಯಕಲ್ಯಾಣಿ ಹೇಳುತ್ತಾರೆ.

ಆ ಸಂದರ್ಭದಲ್ಲಿ ಸತೀಶ್ ವಿರುದ್ಧ ಜಯಕಲ್ಯಾಣಿ ತಂದೆ ಅಪಹರಣದ ಕೇಸು ದಾಖಲಿಸಲು ಮುಂದಾಗಿದ್ದರಂತೆ. ಪ್ರಕರಣ ದಾಖಲಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೇಳಿದಾಗ ಶೇಖರ್ ಬಾಬು ಸುಮ್ಮನಾದರಂತೆ.

ಅಷ್ಟಾಗಿಯೂ ಸತೀಶ್ ವಿರುದ್ಧ ಹಲವಾರು ಸುಳ್ಳು ದೂರು ಮತ್ತು ಕೇಸ್ಗಳನ್ನು ದಾಖಲಿಸಲಾಗಿದೆಯಂತೆ. ತಾವಿಬ್ಬರೂ ತಮಿಳುನಾಡಿಗೆ ವಾಪಸ್ಸು ಹೋದರೆ, ಸರ್ಕಾರವೇ ತನ್ನ ತಂದೆಯ ಕೈಯಲ್ಲಿರುವುದರಿಂದ ಅವರ ಜನ ತಮ್ಮನ್ನು ಕೊಂದು ಹಾಕಲು ಸಹ ಹಿಂಜರಿಯಲಾರರು ಎಂದು ಜಯಕಲ್ಯಾಣಿ ಹೇಳುತ್ತಾರೆ.

ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮ ಓದಿರುವ ಸತೀಶ್ ಅವರದ್ದು ಟ್ರಾನ್ಸಪೋರ್ಟ್ ವ್ಯವಹಾರ ಇತ್ತಂತೆ, ಆದರೆ ಶೇಖರ್ ಬಾಬು ಅವರ ವಾಹನಗಳನ್ನು ಸೀಜ್ ಮಾಡಿಸಿದ್ದಾರೆ ಎಂದು ಜಯಕಲ್ಯಾಣಿ ಹೇಳುತ್ತಾರೆ.

ತಮ್ಮಿಬ್ಬರಿಗೆ ಕರ್ನಾಟಕ ಸರ್ಕಾರದ ರಕ್ಷಣೆ ಬೇಕು, ಜನರ ಮತ್ತು ಮಾಧ್ಯಮಗಳ ಸಹಾಯ ಬೇಕು ಎಂದು ಅವರು ಕೋರುತ್ತಾರೆ.

ಇದನ್ನೂ ಓದಿ:  ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್