James: ಇದು ಅಪ್ಪು ‘ಟ್ರೇಡ್​ಮಾರ್ಕ್’! ‘ಜೇಮ್ಸ್’ ಹಾಡಿನಲ್ಲಿ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್

Puneeth Rajkumar | Trademark Song: ಪುನೀತ್ ರಾಜ್​ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಜೇಮ್ಸ್’ ಚಿತ್ರದ ‘ಟ್ರೇಡ್​ಮಾರ್ಕ್’ ಹಾಡು ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಯೇ ದಾಖಲೆಯ ವೀಕ್ಷಣೆ ಪಡೆಯುತ್ತಿರುವ ಹಾಡನ್ನು ಜನರು ಇಷ್ಟಪಡುತ್ತಿದ್ದಾರೆ.

James: ಇದು ಅಪ್ಪು ‘ಟ್ರೇಡ್​ಮಾರ್ಕ್’! ‘ಜೇಮ್ಸ್’ ಹಾಡಿನಲ್ಲಿ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್
‘ಜೇಮ್ಸ್’ ಚಿತ್ರದಲ್ಲಿ ಪುನೀತ್
Follow us
TV9 Web
| Updated By: shivaprasad.hs

Updated on:Mar 01, 2022 | 11:35 AM

ಪುನೀತ್ ನಟನೆಯ ‘ಜೇಮ್ಸ್’ (James) ಚಿತ್ರಕ್ಕೆ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದಾರೆ. ಅಪ್ಪು ಹೀರೋ ಆಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಮೇಲೆ ಕನ್ನಡಿಗರಿಗೆ ಭಾವನಾತ್ಮಕ ನಂಟಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಜೇಮ್ಸ್’ ಟೀಸರ್ ಹಾಗೂ ಪೋಸ್ಟರ್​​ಗಳು ಅಪಾರ ನಿರೀಕ್ಷೆ ಮೂಡಿಸಿದ್ದವು. ಇದೀಗ ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ (ಮಾ.01) ‘ಜೇಮ್ಸ್’ ಚಿತ್ರದ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಬಹಳ ಭಿನ್ನವಾದ ಅಪ್ಪುವಿನ ‘ಟ್ರೇಡ್​ಮಾರ್ಕ್’ (Trademark Song) ಇರುವ ಹಾಡಿದು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಯೇ ಹಾಡು ಅಪಾರ ವೀಕ್ಷಣೆ ಗಳಿಸುತ್ತಿದ್ದು, ಅಭಿಮಾನಿಗಳ ಮನಸೂರೆಗೊಂಡಿದೆ. ಎಂಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್​ಕುಮಾರ್ ಹಾಗೂ ಚರಣ್​ರಾಜ್ ಈ ಗೀತೆಯನ್ನು ಹಾಡಿದ್ದಾರೆ. ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಚರಣ್​ರಾಜ್ ಸಂಗೀತ ಸಂಯೋಜಿಸಿದ್ದಾರೆ. ‘ಇದು ಕೇವಲ ಹಾಡಲ್ಲ, ಎಲ್ಲಾ ಅಭಿಮಾನಿಗಳ ದನಿಯಿದು’ ಎಂದು ಹಾಡಿನ ಪ್ರಾರಂಭದಲ್ಲೇ ಸಾಲುಗಳು ಬರುತ್ತವೆ. ಅದಕ್ಕೆ ತಕ್ಕಂತೆ ಹಾಡು ಕೂಡ ಮೂಡಿಬಂದಿದೆ.

ಸಾಮಾನ್ಯವಾಗಿ ಲಿರಿಕಲ್​ ಸಾಂಗ್​ಗಳಿಗೆ ಒಂದು ಸಿದ್ಧಸೂತ್ರವನ್ನು ಫಾಲೋ ಮಾಡಲಾಗುತ್ತದೆ.​ ಸಿನಿಮಾದ ಸ್ಟಿಲ್​ಗಳನ್ನು ಹಾಕಿ, ಹಿನ್ನೆಲೆಯಲ್ಲಿ ಹಾಡನ್ನು​ ಹಾಕಲಾಗುತ್ತದೆ. ಆದರೆ, ಜೇಮ್ಸ್​ನ ‘ಟ್ರೇಡ್​ಮಾರ್ಕ್​’ ಇದಕ್ಕಿಂತ ಭಿನ್ನವಾಗಿದೆ. ‘ಟ್ರೇಡ್​ಮಾರ್ಕ್​ ಸಾಂಗ್​ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್​ ಹಾಕಿ ರಿಲೀಸ್​ ಮಾಡುವ ಹಾಗೆ ಮಾಮೂಲಿಯಾಗಿ ಚಿತ್ರತಂಡ ಈ ಹಾಡನ್ನು ತಯಾರಿಸಿಲ್ಲ. ಇದು ಎಲ್ಲರ ಗಮನಸೆಳೆದಿದೆ. ಹಾಡಿನಲ್ಲಿ ಹಲವು ಸರ್ಪ್ರೈಸ್​ಗಳಿವೆ. ಏನೇನು? ಇಲ್ಲಿದೆ ನೋಡಿ.

‘ಟ್ರೇಡ್​ಮಾರ್ಕ್’ ಲಿರಿಕಲ್ ಸಾಂಗ್ ಇಲ್ಲಿದೆ:

ಪಿಆರ್​ಕೆ ಯುಟ್ಯೂಬ್​ನಲ್ಲಿ ‘ಜೇಮ್ಸ್’ನ ‘ಟ್ರೇಡ್​ಮಾರ್ಕ್’ ಹಾಡಿನ ಕನ್ನಡ ಅವತರಣಿಕೆ ರಿಲೀಸ್ ಆಗಿದೆ. ಒಟ್ಟು 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಡಿಗೆ ಯುವರಾಜ್​ಕುಮಾರ್ ಧ್ವನಿ ನೀಡಿರೋದು ವಿಶೇಷ. ಅಷ್ಟೇ ಅಲ್ಲ ಸ್ಯಾಂಡಲ್​ವುಡ್​ನ ಮುಂಚೂಣಿಯ ನಾಯಕಿಯರಾದ ರಚಿತಾ ರಾಮ್, ಆಶಿಕಾ ರಂಗನಾಥ್ ಹಾಗೂ ಶ್ರೀಲೀಲಾ ಈ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ‘ಜೇಮ್ಸ್​​’ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ.

ಇದನ್ನೂ ಓದಿ:

James Teaser: ಪವರ್​ಫುಲ್ ‘ಜೇಮ್ಸ್‘ ನೋಡಿ ಫ್ಯಾನ್ಸ್ ಫಿದಾ; ಇಲ್ಲಿದೆ ಮೈನವಿರೇಳಿಸುವ ಪುನೀತ್ ಆಕ್ಷನ್ ಫೋಟೋಗಳು

James Teaser: ‘ಜೇಮ್ಸ್’ನಲ್ಲಿ ಪುನೀತ್ ಪವರ್! ಖಡಕ್ ಟೀಸರ್ ಇಲ್ಲಿದೆ

Published On - 11:14 am, Tue, 1 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ