​ಹಾವುಗಳ ಪ್ರೇಮದ ಬೆಸುಗೆ: ಬರೋಬ್ಬರಿ ಅರ್ಧ ಗಂಟೆ ಮಿಲನ ದೃಶ್ಯ ಸೆರೆ

Updated on: Jun 29, 2025 | 12:24 PM

ಎರಡು ಹಾವುಗಳ ಮಿಲನ ಮಹೋತ್ಸವವೇ ಕಣ್ಣಿಗೆ ಬೀಳುವುದು ಅಪರೂಪ. ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಹಾವುಗಳ ಮಿಲನದ ದೃಶ್ಯ ಕಂಡುಬಂದಿದೆ. ಬರೋಬ್ಬರಿ ಅರ್ಧಗಂಟೆಗಳ ಕಾಲ ನಡೆದ ಮಿಲನ ಮಹೋತ್ಸವದಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಹೊರಳಾಡುವುದನ್ನು ವ್ಯಕ್ತಿಯೋರ್ವ ತನ್ನ ಮೊಬೈಲ್​ ನಲ್ಲಿ ಸೆರೆಹಿಡಿದಿದ್ದಾನೆ.

ಕೊಪ್ಪಳ, (ಜೂನ್ 29): ಎರಡು ಹಾವುಗಳ ಮಿಲನ ಮಹೋತ್ಸವವೇ ಕಣ್ಣಿಗೆ ಬೀಳುವುದು ಅಪರೂಪ. ಇಂತಹ ದೃಶ್ಯ ಕಂಡರೆ ಗ್ರಾಮೀಣ ಪ್ರದೇಶದ ಜನ ಭಯ, ಭಕ್ತಿಯಿಂದ ಕೈಮುಗಿದು ಮುಂದಕ್ಕೆ ಸಾಗುತ್ತಾರೆ. ಈ ದೃಶ್ಯ ನೋಡುವುದು ಮಹಾಪಾಪ, ಹಾವುಗಳ ಶಾಪಕ್ಕೆ ತುತ್ತಾಗುತ್ತೇವೆ ಎಂಬ ಭೀತಿ, ಮೂಢನಂಬಿಕೆ ಇಂದಿಗೂ ಕೆಲವರಲ್ಲಿದೆ. ಆದರೂ ಕೆಲವರು ಹಾವುಗಳ ಮಿಲನದ ದೃಶ್ಯವನ್ನು ಸೆರೆಹಿಡಿಯುತ್ತಾರೆ. ಅದರಂತೆ ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಹಾವುಗಳ ಮಿಲನದ ದೃಶ್ಯ ಕಂಡುಬಂದಿದೆ. ಬರೋಬ್ಬರಿ ಅರ್ಧಗಂಟೆಗಳ ಕಾಲ ನಡೆದ ಮಿಲನ ಮಹೋತ್ಸವದಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಹೊರಳಾಡುವುದನ್ನು ವ್ಯಕ್ತಿಯೋರ್ವ ತನ್ನ ಮೊಬೈಲ್​ ನಲ್ಲಿ ಸೆರೆಹಿಡಿದಿದ್ದಾನೆ.

Published on: Jun 29, 2025 12:20 PM
Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More