ಶ್ರೀರಂಗಪಟ್ಟಣ ಬಳಿ ಎರಡು ಟಿಪ್ಪರ್​ಗಳ ನಡುವೆ ಢಿಕ್ಕಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2025 | 10:08 AM

ಅಪಘಾತ ನಡೆದ ಸ್ಥಳದಲ್ಲಿ ಒಬ್ಬ ಪೊಲೀಸ್ ಕಾನ್​ಸಟೇಬಲ್ ಇದ್ದಾರೆ. ಪ್ರಕರಣವನ್ನು ಅವರು ದಾಖಲಿಸಿಕೊಂಡಿರಬಹುದು. ಪಕ್ಕದಿಂದ ಬರುತ್ತಿದ್ದ ಟಿಪ್ಪರ್​​ನ ಬ್ರೇಕ್ ಫೇಲ್ ಆಗಿರುವ ಸಾಧ್ಯತೆ ಇದೆ. ಚಾಲಕನಿಗೆ ಮುಖ್ಯರಸ್ತೆಯಲ್ಲಿ ಟಿಪ್ಪರ್​ನಂಥ ದೊಡ್ಡ ವಾಹನ ಬರ್ತಾ ಇದ್ದಿದ್ದು ಕಂಡರೂ ತನ್ನ ವಾಹನವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಎರಡೂ ಟಿಪ್ಪರ್​ಗಳ ಚಾಲಕರಿಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ.

ಮಂಡ್ಯ, ಜೂನ್ 7: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಬಳಿ ಇಂದು ಬೆಳಗ್ಗೆ ಅಪಘಾತವೊಂದು ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ (no casualties) ಆಗಿಲ್ಲ. ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವೀಸ್ ರೋಡಲ್ಲಿ ಎರಡು ಟಿಪ್ಪರ್​ಗಳ ನಡುವೆ ನಡೆದ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೇರವಾಗಿ ಬರುತ್ತಿದ್ದ ಟಿಪ್ಪರೊಂದಕ್ಕೆ ಬಲಭಾಗದ ರಸ್ತೆಯಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್ ಢಿಕ್ಕಿ ಹೊಡೆದ ಕಾರಣ ಎರಡು ವಾಹನಗಳಲ್ಲಿ ಒಂದು ಪಕ್ಕದಲ್ಲಿದ್ದ ಹೋಟೆಲ್ ಕಡೆ ನುಗ್ಗಿದೆ. ಹೋಟೆಲ್​ನಲ್ಲಿ ಬಹಳ ಜನ ಇದ್ದಾಗ್ಯೂ ಯಾರೂ ಗಾಯಗೊಂಡಿಲ್ಲ.

ಇದನ್ನೂ ಓದಿ:  Tumkur Accident: ತುಮಕೂರು ಹಿರೇಹಳ್ಳಿ ಬಳಿ ಭೀಕರ ಅಪಘಾತ, ಕಂಟೇನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.