US Nationals: ಅಮರನಾಥ ಯಾತ್ರೆ ಮಾಡಲು 40 ವರ್ಷಗಳಿಂದ ಕನಸು ಕಾಣುತ್ತಿದ್ದ ಇಬ್ಬರು ಅಮೆರಿಕನ್ನರಿಗೆ ಅದು ಸಾಧ್ಯವಾಗಿದ್ದು ಭೋಲೆನಾಥನ ಕೃಪೆಯಿಂದ!

|

Updated on: Jul 12, 2023 | 12:25 PM

ತಾವು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಅನುಯಾಯಿಗಳು ಎಂದು ಯುಎಸ್ ಪ್ರಜೆಗಳು ಹೇಳುತ್ತಾರೆ.

ಬೆಂಗಳೂರು: ಅಮೆರಿಕದ ಇಬ್ಬರು ಮಧ್ಯವಯಸ್ಕ ವ್ಯಕ್ತಿಗಳು ಕಾವಿ ಬಟ್ಟೆ ಧರಿಸಿ ಅಮರನಾಥ ಯಾತ್ರೆಗೆ (Amaranth Yatra) ಆಗಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ, ರಮಣೀಯವಾಗಿ ಕಾಣುವ ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ನಿಂತಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತಾವು ಅಲ್ಲಿಗೆ ಬರಲು ಆದ ಪ್ರೇರೇಪಣೆ ಹಾಗೂ ಅನುಭವವನ್ನು ವಿವರಿಸುತ್ತಿದ್ದಾರೆ. ಆಮರನಾಥ ಯಾತ್ರೆ ಬಗ್ಗೆ ಅವರಿಗೆ ಗೊತ್ತಾಗಿದ್ದು ಹೇಗೆ ಅಂತ ಕೇಳಿದ ಪ್ರಶ್ನೆಗೆ ಅವರಲ್ಲೊಬ್ಬರು, ತಾವು ರಾಮಕೃಷ್ಣ ಪರಮಹಂಸ (Ramakrishna Paramahamsa) ಮತ್ತು ಸ್ವಾಮಿ ವಿವೇಕಾನಂದ (Swami Vivekananda) ಅವರ ಅನುಯಾಯಿಗಳು ಎಂದು ಹೇಳುತ್ತಾರೆ. ಅಮರನಾಥ ಯಾತ್ರೆ ಮಾಡುವ ಕನಸನ್ನು ಅವರು ಸುಮಾರು 40 ವರ್ಷಗಳಿಂದ ಕಾಣುತ್ತಿದ್ದರಂತೆ ಮತ್ತು ಅದು ಸಾಧ್ಯವಾಗಿದ್ದು ಭಗವಾನ್ ಶಿವನ ಕೃಪೆಯಿಂದಾಗಿ ಎಂದು ಹೇಳುತ್ತಾರೆ.

‘ಕಳೆದ ಮೂರು ವರ್ಷಗಳಿಂದ ನಾವು ಪ್ರತಿದಿನ ಅರತಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದೆವು. ಇಲ್ಲಿಗೆ ಆಗಮಿಸಿದ ನಂತರ ನಮ್ಮಲ್ಲಿ ಉಂಟಾಗಿರುವ ಭಾವನೆಯನ್ನು ವಿವರಿಸುವುದು ಅಸಾಧ್ಯ. ಅನಿರ್ವಚನೀಯ ಧನ್ಯತಾ ಭಾವ ಮತ್ತು ಸಂತೋಷ ನಮಗಾಗಿದೆ,’ ಎಂದು ಅವರಲ್ಲಿ ಒಬ್ಬರು ಹೇಳುತ್ತಾರೆ.

ಹನ್ನೆರಡು ವರ್ಷಗಳಿಗೊಮ್ಮೆ ಕುಂಭಮೇಳ ಮತ್ತು ಪ್ರತಿವರ್ಷ ನಡೆಯುವ ಅಮರನಾಥ ತೀರ್ಥಯಾತ್ರೆಗಳು ವಿಶ್ವದ ನಾನಭಾಗಗಳ ಜನರನ್ನು ಜನ ಇಲ್ಲಿಗೆ ಭೇಟಿ ನೀಡಲು ಪ್ರೇರೇಪಿಸುತ್ತಿವೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jul 12, 2023 12:25 PM