KSRTC driver Jagadish case; ವಿಷಯಾಂತರ ಮಾಡಲು ಅಂಬ್ಯುಲೆನ್ಸ್ ತಡೆದ ಅರೋಪ ಮಾಡಲಾಗುತ್ತಿದೆ: ಸುರೇಶ್ ಗೌಡ, ಮಾಜಿ ಶಾಸಕ

KSRTC driver Jagadish case; ವಿಷಯಾಂತರ ಮಾಡಲು ಅಂಬ್ಯುಲೆನ್ಸ್ ತಡೆದ ಅರೋಪ ಮಾಡಲಾಗುತ್ತಿದೆ: ಸುರೇಶ್ ಗೌಡ, ಮಾಜಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2023 | 11:21 AM

ಜಗದೀಶ್ ಬರೆದ ಡೆತ್ ನೋಟ್ ನ ಒರಿಜಿನಲ್ ಕಾಪಿ ನಾಪತ್ತೆಯಾಗಿದೆ, ಕೇವಲ ಅದರ ಜಿರಾಕ್ಸ್ ಪ್ರತಿ ಮಾತ್ರ ಹರಿದಾಡುತ್ತಿದೆ ಎಂದು ಮಾಜಿ ಶಾಸಕ ಹೇಳಿದರು.

ಮಂಡ್ಯ: ಕೆಲದಿನಗಳ ಹಿಂದೆ ಡೆತ್ ನೋಟ್ ನಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (N Cheluvarayaswamy) ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಪ್ರಯತ್ನಿಸಿದ ನಾಗಮಂಗಲ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಡ್ರೈವರ್ ಜಗದೀಶರನ್ನು (driver Jagadish) ಅಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಅನ್ನು ಉದ್ದೇಶಪೂರ್ವಕವಾಗಿ ತಡೆದ ಆರೋಪ ಎದುರಿಸುತ್ತಿರುವ ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಸ್ಪಷ್ಟನೆ ನೀಡಿದ್ದಾರೆ. ತಾನಾಗಲೂ ಅಥವಾ ತನ್ನ ಹೆಂಡತಿ ಇಲ್ಲವೇ ಮಗಳಾಗಲೀ ಅಂಬ್ಯುಲೆನ್ಸ್ ತಡೆಯುವ ಪ್ರಯತ್ನ ಮಾಡಿಲ್ಲ, ಈ ಆರೋಪ ಸತ್ಯಕ್ಕೆ ದೂರವಾದದ್ದು; ಸಿಸಿಟಿವಿ ಫುಟೇಜ್ ನಲ್ಲಿ ತಮ್ಮ ಕುಟುಂಬ ಹಾಗೆ ಮಾಡಿದ್ದು ಕಂಡುಬಂದರೆ ತಾವು ಶಿಕ್ಷೆ ಅನುಭವಿಸಲು ಸಿದ್ಧ ಎಂದು ಸುರೇಶ್ ಗೌಡ ಹೇಳಿದರು. ನಾಗಮಂಗಲದ ತಮ್ಮ ಕಚೇರಿಯಲ್ಲಿ ಟಿವಿ9 ಕನ್ನಡ ವಾಹಿನಿ ಮಂಡ್ಯದ ವರದಿಗಾರನೊಂದಿಎಗ ಮಾತಾಡಿದ ಗೌಡ, ವಿಷಯಾಂತರ ಮಾಡಲು ಈ ಬಗೆಯ ಆರೋಪಗಳನ್ನು ಮಾಡಲಾಗಿದೆ, ಅಸಲು ವಿಷಯವನ್ನು ಮುಚ್ಚಿಡಲಾಗುತ್ತಿದೆ. ಜಗದೀಶ್ ಬರೆದ ಡೆತ್ ನೋಟ್ ನ ಒರಿಜಿನಲ್ ಕಾಪಿ ನಾಪತ್ತೆಯಾಗಿದೆ, ಕೇವಲ ಅದರ ಜಿರಾಕ್ಸ್ ಪ್ರತಿ ಮಾತ್ರ ಹರಿದಾಡುತ್ತಿದೆ ಎಂದು ಮಾಜಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ