Night Patrolling at tomato farms: ಸೈನಿಕರು ದೇಶದ ಗಡಿ ಕಾಯುವಂತೆ ರೈತರು ತಮ್ಮ ಟೊಮ್ಯಟೊ ಬೆಳೆ ಕಾಯುವ ಸ್ಥಿತಿ ಚಿಕ್ಕಬಳ್ಳಾಪುರದಲ್ಲಿ!
ದೇಶದೆಲ್ಲೆಡೆ ಟೊಮ್ಯಟೋಗೆ ಬಂಗಾರ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಹಣ್ಣಿನ ಕಳುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ.
ಚಿಕ್ಕಬಳ್ಳಾಪುರ: ಎಂಥ ಕಾಲ ತಂದ್ಯೋ ಶಿವನೇ ತಂದಿಟ್ಟೋ ಟೊಮ್ಯಾಟೋ ತೋಟ ಕಾಯುವ ಕಾಲ… ಅಂತ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಟೊಮ್ಯಾಟೋ ಬೆಳೆಗಾರರು (tomato farmers) ಹಾಡುತ್ತಿದ್ದರೆ ಆಶ್ಚರ್ಯವಿಲ್ಲ. ದೇಶದೆಲ್ಲೆಡೆ ಟೊಮ್ಯಟೋಗೆ ಬಂಗಾರ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಹಣ್ಣಿನ ಕಳುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಟೊಮ್ಯಾಟೋ ಲೋಡ್ ಆಗಿರುವ ವ್ಯಾನ್ ಗಳನ್ನು ಸಹ ಕದ್ದುಕೊಂಡು ಹೋಗಲಾಗುತ್ತಿದೆ. ಬೆಳೆಯನ್ನು ಕಳ್ಳರಿಂದ ರಕ್ಷಿಸಲು ರೈತರು ತಮ್ಮ ತೋಟಗಳನ್ನು ಸೈನಿಕರು (soldiers) ದೇಶದ ಗಡಿಯನ್ನು ಕಾಯುವ ಹಾಗೆ ರಾತ್ರಿಯಿಡೀ ಕೈಯಲ್ಲಿ ಕೋಲು ಮತ್ತು ಟಾರ್ಚ್ ಹಿಡಿದು ಕಾಯುತ್ತಿದ್ದಾರೆ. ದೇಶದ ಕೆಲ ಭಾಗಗಳಲ್ಲಿ ಪ್ರತಿ ಕೆಜಿ ಹಣ್ಣಿನ ಬೆಲೆ ರೂ. 200 ದಾಟಿ ರೂ. 250ರವರೆಗೆ ಹೋಗಿದೆ, ಕರ್ನಾಟಕದಲ್ಲಿ ರೂ. 100-150 ರವರೆಗೆ ಮಾರಾಟವಾಗುತ್ತಿದೆ. ಹಾಗಾಗೇ ಟೊಮ್ಯಾಟೊ ಹೇರಳವಾಗಿ ಬೆಳೆಯುವ ಚಿಕ್ಕಬಳ್ಳಾಪುರ (chikkaballapura) ಮತ್ತು ಕೋಲಾರ (Kolar) ಜಿಲ್ಲೆಗಳ ರೈತರು ತಮ್ಮ ತಮ್ಮ ತೋಟಗಳನ್ನು ಮುತುವರ್ಜಿಯಿಂದ ಕಾವಲು ಕಾಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ