ಬಿಎಂಟಿಸಿ ಬಸ್ಸಲ್ಲಿ ಕಿಟಕಿ ತೆರೆಯುವ ವಿಷಯಕ್ಕೆ ಇಬ್ಬರು ಮಹಿಳೆಯರ ನಡುವೆ ಕಿತ್ತಾಟ, ಆಯುಧಗಳಾದ ಚಪ್ಪಲಿಗಳು!

|

Updated on: Feb 08, 2024 | 10:59 AM

ನಿನ್ನೆ ರಾತ್ರಿ ಮೆಜೆಸ್ಟಿಕ್ ನಿಂದ ಪೀಣ್ಯ ಕಡೆ ಹೊರಟಿದ್ದ ಬಿಎಂಟಿಸಿಇ ಬಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ಕಿಟಕಿ ತೆರೆಯುವ-ಮುಚ್ಚುವ ವಿಷಯದಲ್ಲಿ ರಂಪಾಟ ಶುರುವಾಗಿ ತಾರಕಕ್ಕೇರಿದೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಅಂದರೆ, ಕಿತ್ತಾಡುತ್ತಿದ್ದ ಮಹಿಳೆಯರು ಚಪ್ಪಲಿಗಳಿಂದಲೂ ಹೊಡೆದಾಡಿದರಂತೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಗಳಲ್ಲಿ ರೆಗ್ಯುಲರ್ ಆಗಿ ಕೆಲಸ ಮಾಡುವವರಿಗೆ ಇಂಥ ದೃಶ್ಯಗಳು ಅಪರೂಪವಲ್ಲ. ಜಗಳ, ಕಿತ್ತಾಟ ಕೆಲವು ಸಲ ಹೊಡೆದಾಟ ನಡೆಯುತ್ತಿರುತ್ತವೆ. ಜಗಳ ಮಾಡೋರು ಅದರಲ್ಲಿ ಮಗ್ನರಾಗಿದ್ದರೆ ಮಿಕ್ಕಿದವರು ಪುಕ್ಕಟೆ ಮನರಂಜನೆ (entertainment) ತೆಗೆದುಕೊಳ್ಳುತ್ತಿರುತ್ತಾರೆ. ಮಹಿಳಾ ಪ್ರಯಣಿಕರು (women passengers) ಇದಕ್ಕೆ ಅಪವಾದವೇನಲ್ಲ. ಇಲ್ಲೊಂದು ಉದಾಹರಣೆಯನ್ನು ನೋಡಬಹುದು. ನಮಗೆಲ್ಲ ಗೊತ್ತಿರುವ ಹಾಗೆ ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಮೇಲೆ ಬಸ್ ಗಳಲ್ಲಿ ಸ್ತ್ರೀಯರ ಓಡಾಟ ಹೆಚ್ಚಾಗಿದೆ. ನಿನ್ನೆ ರಾತ್ರಿ ಮೆಜೆಸ್ಟಿಕ್ ನಿಂದ ಪೀಣ್ಯ ಕಡೆ ಹೊರಟಿದ್ದ ಬಿಎಂಟಿಸಿಇ ಬಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ಕಿಟಕಿ ತೆರೆಯುವ-ಮುಚ್ಚುವ ವಿಷಯದಲ್ಲಿ ರಂಪಾಟ ಶುರುವಾಗಿ ತಾರಕಕ್ಕೇರಿದೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಅಂದರೆ, ಕಿತ್ತಾಡುತ್ತಿದ್ದ ಮಹಿಳೆಯರು ಚಪ್ಪಲಿಗಳಿಂದಲೂ ಹೊಡೆದಾಡಿದರಂತೆ. ಆ ದೃಶ್ಯ ಈ ಮೊಬೈಲ್ ಒಂದರಲ್ಲಿ ಸೆರೆಹಿಡಿದಿರುವ ವಿಡಿಯೋದಲ್ಲಿ ಇಲ್ಲ. ನಾವು ಆಗಲೇ ಹೇಳಿದಂತೆ ಸ್ತ್ರೀಯರ ಹಿಂಭಾಗದಲ್ಲೇ ಇರುವ ಕಂಡಕ್ಟರ್ ಮತ್ತು ಉಳಿದ ಜನ ಜಗಳದ ದೃಶ್ಯವನ್ನು ಎಂಜಾಯ್ ಮಾಡುತ್ತಿದ್ದರೆ ಡ್ರೈವರ್ ತನ್ನ ಪಾಡಿಗೆ ತಾನು ಬಸ್ ಓಡಿಸುತ್ತಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ