ವಿಜಯಪುರದ 2 ವರ್ಷದ ಈ ಪುಟ್ಟ ಬಾಲಕಿಗೆ ಇದೆ ಬೆರಗಾಗುವ ಮೆಮೋರಿ ಪವರ್!

ಆಯೇಷಾ ಬಾನು
|

Updated on: Dec 06, 2020 | 1:51 PM

ಮಕ್ಕಳಿದ್ದ ಮನೀಗೆ ಬೀಸಣೀಕೆ ಯಾಕವ್ವಾ.... ಪುಟ್ಟ ಕಂದಮ್ಮಾ.. ಹೊರಗೋಡಿ.. ಒಳ ಬಂದರ ಸುಳಿದಾವ ತಂಗಾಳಿ.... ಎಂಬ ಜನಪದ ಹಾಡು ಅದೆಷ್ಟು ಅರ್ಥಗರ್ಭೀತವಾಗಿದೆ. ಅದರಲ್ಲೂ ಪುಟ್ಟ ಪುಟ್ಟ ಪುಟಾಣಿಗಳು ತೊದಲು ನುಡಿಯಲ್ಲಿ ಮಾತನಾಡಿದರೆ ಅದರ ಸೊಬಗೇ ಸೊಬಗು. ಇನ್ನು ಬಸವನಾಡು ವಿಜಯಪುರ ನಗರದಲ್ಲಿನ 2 ವರ್ಷದ ಪೋರಿ ಚಟಪಟನೇ ಅರಳು ಹುರಿದಂತೆ ಮಾತನಾಡುತ್ತಾಳೆ. ಇಷ್ಟೇ ಅಲ್ಲ ಈ ಪುಟ್ಟ ಪೋರಿಗೆ ಅಗಾಧವಾದ ಜ್ಞಾಪಕ ಶಕ್ತಿಯಿದ್ದು, ಈಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.