ಹರಿಹರ ಬಳಿಯ ಡ್ಯಾಂನಲ್ಲಿ ವಿಡಿಯೋ ಮಾಡಲು ಪ್ರಯತ್ನಿಸಿದ ಇಬ್ಬರು ಯುವಕರು ನೀರು ಪಾಲು!
ಮೊದಲು 24 ವರ್ಷದ ಪ್ರಕಾಶ್ ಎಂಬ ಯುವಕ ರೀಲ್ಸ್ ಮಾಡುವ ಭರದಲ್ಲಿ ಡ್ಯಾಮ್ ಮೇಲಿಂದ ನೀರಿಗೆ ಬಿದ್ದಿದ್ದಾನೆ. ಅವನನ್ನು ಉಳಿಸಲು ನೀರಿಗೆ ಧುಮಕಿದ 25 ವರ್ಷ ಪವನ್ ಸಹ ಪ್ರಕಾಶ್ ನೊಂದಿಗೆ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ.
ದಾವಣಗೆರೆ: ಸೆಲ್ಫೀ ತೆಗೆದುಕೊಳ್ಳಲು ಮತ್ತು ರೀಲ್ಸ್ ಮಾಡುವ ಉದ್ದೇಶದಿಂದ ನೀರಿನ ಬಳಿಗೆ ಹೋಗಬೇಡಿ ಅಂತ ಪದೇಪದೆ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಯವರು ಎಚ್ಚರಿಸಿದರೂ ಯುವಕರಿಗೆ ಅರ್ಥವಾಗದಿರುವುದು ಆತಂಕ ಮೂಡಿಸುತ್ತದೆ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹರಗನಹಳ್ಳಿಯಲ್ಲಿರುವ ಈ ಚೆಕ್ ಡ್ಯಾಮನ್ನೊಮ್ಮೆ ನೋಡಿ. ಇಬ್ಬರು ಯುವಕರು ಇಲ್ಲಿ ವಿಡಿಯೋ ಮಾಡಲು ಹೋಗು ನೀರು ಪಾಲಾಗಿದ್ದಾರೆ. ಮೊದಲು 24 ವರ್ಷದ ಪ್ರಕಾಶ್ ಎಂಬ ಯುವಕ ರೀಲ್ಸ್ ಮಾಡುವ ಭರದಲ್ಲಿ ಡ್ಯಾಮ್ ಮೇಲಿಂದ ನೀರಿಗೆ ಬಿದ್ದಿದ್ದಾನೆ. ಅವನನ್ನು ಉಳಿಸಲು ನೀರಿಗೆ ಧುಮಕಿದ 25 ವರ್ಷ ಪವನ್ ಸಹ ಪ್ರಕಾಶ್ ನೊಂದಿಗೆ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ.