Loading video

ಉದಯಗಿರಿ ಗಲಭೆ: ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋ ವೈರಲ್

| Updated By: ವಿವೇಕ ಬಿರಾದಾರ

Updated on: Feb 15, 2025 | 10:54 AM

ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆಯ ವಿಡಿಯೋಗಳು ವೈರಲ್ ಆಗಿವೆ. ಸಾವಿರಾರು ಜನರು ಠಾಣೆ ಮುಂದೆ ಜಮಾಯಿಸಿದ್ದರು. ಡಿಸಿಪಿ ಮುತ್ತುರಾಜು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ, ಯುವಕರ ಗುಂಪು ಕಲ್ಲು ತೂರಾಟ ನಡೆಸಿತು. ಪೊಲೀಸರು ಧೈರ್ಯದಿಂದ ಕಾರ್ಯನಿರ್ವಹಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸರ ಸಾಹಸದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೈಸೂರು, ಫೆಬ್ರವರಿ 15: ಉದಯಗಿರಿ ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟದ ಮತ್ತಷ್ಟು ವಿಡಿಯೋಗಳು ಟಿವಿ9ಗೆ ಲಭ್ಯವಾಗಿವೆ. ಫೋಸ್ಟ್​ ವೈರಲ್​ ಆಗುತ್ತಿದ್ದಂತೆ ಏಕಾಏಕಿ ಠಾಣೆ ಮುಂದೆ ಸಾವಿರಕ್ಕೂ ಅಧಿಕ ಜನ ಜಮಾಯಿಸಿದರು. ಈ ವೇಳೆ ಜನರನ್ನು ಸಮಾಧಾನಗೊಳಿಸಲು ಡಿಸಿಪಿ ಮುತ್ತುರಾಜು ಪೊಲೀಸ್ ಜೀಪ್ ಮೇಲೆ ನಿಂತು ಸಮಾಧಾನ ಮಾಡಲು ಯತ್ನಿಸಿದ್ದರು. ಆದರೂ ಸುಮ್ಮನಾಗದ ಯುವಕರ ಗುಂಪು ಕಿರುಚಾಡುತ್ತಾ ಘೋಷಣೆ ಕೂಗಿದ್ದರು. ಸಾವಿರಾರು ಜನರ ಮಧ್ಯೆ ಬೆರಳೆಣಿಕೆಯಷ್ಟು ಪೊಲೀಸರು ಮಾತ್ರ ನಿಂತು ಕಾರ್ಯನಿರ್ವಹಿಸಿದರು. ಈ ವೇಳೆ ಏಕಾಏಕಿ ಕಲ್ಲು ತೂರಾಟ ನಡೆಸಿ ಗ್ಯಾಂಗ್​ ದಾಂದಲೆ ನಡೆಸಿದರು. ಕಲ್ಲು ತೂರಾಟಕ್ಕೂ ಜಗ್ಗದೆ ಪೊಲೀಸರು ಕಾರ್ಯನಿರ್ವಹಿಸಿದರು. ಗುಂಪಿನ ಮಧ್ಯೆ ಧೃತಿಗೆಡದೆ ಪರಿಸ್ಥಿತಿ ನಿಭಾಯಿಸಿ, ಅಷ್ಟೂ ಜನರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದರು. ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋಗಳು ವೈರಲ್ ಆಗಿವೆ.

Published on: Feb 15, 2025 07:34 AM