ಕೃಷಿ ಸಂಶೋಧನಾ ಕೇಂದ್ರದಲ್ಲಿನ ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಆರೋಪ ಕೇಳಿಬಂದಿದೆ. ಕೃಷಿ ಮತ್ತು ಅರಣ್ಯ ಅಧಿಕಾರಿಗಳ ಶಾಮೀಲಿನ ಶಂಕೆ ವ್ಯಕ್ತವಾಗಿದೆ. ಗೇರು, ಮಾವು ಸೇರಿ ನೂರಾರು ಮರಗಳನ್ನು ಕಟಾವು ಮಾಡಲಾಗಿದ್ದು, ಸರ್ಕಾರಿ ಆಸ್ತಿ ಕಬಳಿಕೆಯ ಹಗರಣದ ಬಗ್ಗೆ ತನಿಖೆಗೆ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಉಡುಪಿ, ಡಿಸೆಂಬರ್ 29: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೃಷಿ ಸಂಶೋಧನಾ ಕೇಂದ್ರದಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಮರಗಳಿಗೆ ಅಧಿಕಾರಿಗಳು ಕೊಡಲಿ ಏಟು ನೀಡಿದ್ದಾರೆ. ಗೇರು,ಮಾವು ಮರಗಳ ಗೆಲ್ಲು ಕಟಾವಿನ ಹೆಸರಿನಲ್ಲಿ ಬೆಲೆಬಾಳುವ ಮರಗಳ ಮಾರಣಹೋಮ ನಡೆದಿದೆ. ಕೃಷಿ ಕೇಂದ್ರದ ಅಧಿಕಾರಿಗಳ ಮೇಲೆ ಮರ ಸಾಗಾಣಿಕೆಯ ಆರೋಪ ಕೇಳಿಬಂದಿದೆ. ಕೃಷಿ ಅಧಿಕಾರಿಗಳ ಜೊತೆ ಅರಣ್ಯಾಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮರ ಮಾರಾಟ ಮಾಡಿದ್ದ ಬಗ್ಗೆ ತನಿಖೆ ಮಾಡುವಂತೆ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
