Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಪ್ರಿಯಾಂಕಾ ಚೋಪ್ರಾ ಅವರ ಇಂಡಿಯನ್ ಹೋಟೆಲ್ ಮೆನು ನೋಡಿ…! ಬಾಣಸಿಗ ಯಾರು ಗೊತ್ತಾ?

ಸಾಧು ಶ್ರೀನಾಥ್​
|

Updated on: Mar 23, 2021 | 3:49 PM

ನಟಿ ಪ್ರಿಯಾಂಕಾ ಅವರ ಸೋನಾ ಹೆಸರಿನ ಇಂಡಿಯನ್ ರೆಸ್ಟೋರೆಂಟ್​ನಲ್ಲಿ ಭಾರತೀಯ ಶೈಲಿಯ ಆಹಾರ ಸಿಗಲಿದೆ. ಅದರಲ್ಲೂ ದಕ್ಷಿಣ ಭಾರತದಿಂದ ಮತ್ತು ಉತ್ತರ ಭಾರತದವರೆಗಿನ ಎಲ್ಲಾ ಆಹಾರ ಪದ್ದತಿ ಸೋನಾದಲ್ಲಿ ಸಿಗಲಿವೆ. ಜೊತೆಗೆ ಇಲ್ಲಿ ವಿಶೇಷವಾಗಿ ಕನ್ನಡಿಗರಿಗೆ ಒಂದು ಸುದ್ದಿ ಇದೆ. ನಟಿಯ ರೆಸ್ಟೋರೆಂಟ್ ನಲ್ಲಿ ನಮ್ಮದೇ ಉಡುಪಿ ಮೂಲದ ಖ್ಯಾತ ಬಾಣಸಿಗ ಕೆಲಸ ಮಾಡಲಿದ್ದಾರೆ.

ಹರಿ ನಾಯಕ್ ಎಂಬ ಹೆಸರು ಭೋಜನ ಪ್ರಿಯರಿಗೆ ಬಹಳಷ್ಟು ಚಿರ ಪರಿಚಯ. ಅವರು ನಟಿ ಪ್ರಿಯಾಂಕಾ ರೆಸ್ಟೋರೆಂಟ್ ನ ಪ್ರಮುಖ ಬಾಣಸಿಗರಾಗಿ ಕೆಲಸ ಮಾಡಲಿದ್ದಾರೆ…

ನಟಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಮಾಧ್ಯಯಮಗಳ ಹೆಡ್ ಲೆನ್ಸ್ ನಲ್ಲಿ ಸಿಕ್ಕಾ ಪಟ್ಟೆ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದ ಇವರು ಹಾಲಿವುಡ್ ಗೆ ಹಾರಿದ್ದು ಅಲ್ಲಿ ಸಹ ಸಿಕ್ಕಾ ಪಟ್ಟೆ ಸೌಂಡು ಮಾಡುತ್ತಿದ್ದಾರೆ. ಅಲ್ಲೇ ಬ್ಯುಸಿಯಾಗಿರುವ ಕಾರಣ ತನ್ನ ವಾಸ್ತವ್ಯವನ್ನ ಈಗಾಗಲೇ ಅಮೆರಿಕಾಗೆ ಶಿಫ್ಟ್ ಮಾಡಿಕೊಂಡಿದ್ದಾರೆ.

ಅಂದಹಾಗೆ, ನಟಿ ಪ್ರಿಯಾಂಕ ಚೋಪ್ರಾ ಅಮೆರಿಕಾದಲ್ಲಿ ಹೊಸದೊಂದು ಬ್ಯುಸಿನೆಸ್ ಶುರು ಮಾಡಿಕೊಂಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಇಂಡಿಯನ್ ರೆಸ್ಟೋರೆಂಟ್ ಆರಂಭಿಸುತ್ತಿದ್ದಾರೆ. ಹೀಗಾಗಿ ಅಮೇರಿಕದ ನೆಲದಲ್ಲಿ ಭಾರತಿಯ ಸಂಸ್ಕೃತಿ ಪಸರಿಸುತ್ತಿರುವ ನಟಿ ಪ್ರಿಯಾಂಕಾ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ವಿಶೇಷವೆಂದರೆ ನಟಿ ಪ್ರಿಯಾಂಕಾ ರೆಸ್ಟೋರೆಂಟ್ ನ ಮೆನುನಲ್ಲಿ ಏನಿದೆ ಎನ್ನುವ ಒಂದಿಷ್ಟು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.