ಪಾಪನಾಶಿನಿ ನದಿಯಲ್ಲಿ ಕಾಣಿಸಿಕೊಂಡ ಸುಳಿಗಾಳಿ: ಅಪರೂಪದ ದೃಶ್ಯ ಮೊಬೈಲ್‌ನಲ್ಲಿ ಸೆರೆ
ಪಾಪನಾಶಿನಿ ನದಿಯಲ್ಲಿ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಳಿಯ ರಭಸಕ್ಕೆ ಆಕಾಶಕ್ಕೆ ನೀರು ಚಿಮ್ಮುತ್ತಿರುವ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಉಡುಪಿ: ನದಿ ಮದ್ಯದಲ್ಲಿ ಸುಳಿಗಾಳಿ ಕಾಣಿಸಿಕೊಂಡಿರುವಂತಹ ಘಟನೆ ಉಡುಪಿಯ ಪಾಪನಾಶಿನಿ ನದಿಯಲ್ಲಿ ದೃಶ್ಯ ಕಂಡು ಬಂದಿದೆ. ಸುಳಿಗಾಳಿಯಿಂದ ಆಕಾಶದೆಡೆಗೆ ನದಿ ನೀರು ಚಿಮ್ಮಿದೆ. ಅಂಬಲಪಾಡಿ, ಕಿದಿಯೂರು ಚಕ್‌ಪಾದೆಯಲ್ಲಿ ತೀರದಲ್ಲಿ ಘಟನೆ ನಡೆದಿದೆ. ಸಾಮಾನ್ಯವಾಗಿ ಖಾಲಿ ಮೈದಾನದಲ್ಲಿ ಸುಳಿಗಾಳಿ ಕಾಣಿಸಿಕೊಂಡು, ದೂಳು ಮೇಲಕ್ಕೇರುವುದನ್ನು ನಾವು ನೋಡಿರುತ್ತೇವೆ. ಆದರೆ ಪಾಪನಾಶಿನಿ ನದಿಯಲ್ಲಿ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಳಿಯ ರಭಸಕ್ಕೆ ಆಕಾಶಕ್ಕೆ ನೀರು ಚಿಮ್ಮುತ್ತಿರುವ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.