ಕುಡಿದ ಮತ್ತಿನಲ್ಲಿ ಪೊಲೀಸ್ ವಾಹನ ಚಲಾಯಿಸಿ ಆಟೋ, ಬೈಕ್ಗೆ ಗುದ್ದಿದ ಕಾನ್ಸ್ಟೇಬಲ್: ವಿಡಿಯೋ ವೈರಲ್
ಪೊಲೀಸ್ ಪೇದೆ ಕುಡಿದ ಮತ್ತಿನಲ್ಲಿ ಪೊಲೀಸ್ ವಾಹನ ಚಲಾಯಿಸಿ ಆಟೋ, ಬೈಕ್ ಸಹಿತ ಹಲವು ವಾಹನಗಳಿಗೆ ಗುದ್ದಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾನದಲ್ಲಿ ನಡೆದಿದೆ.
ಉಡುಪಿ, ಜನವರಿ 03: ಪೊಲೀಸ್ ಪೇದೆ (Police Constable) ಕುಡಿದ ಮತ್ತಿನಲ್ಲಿ ಪೊಲೀಸ್ (Police) ವಾಹನ ಚಲಾಯಿಸಿ ಆಟೋ, ಬೈಕ್ ಸಹಿತ ಹಲವು ವಾಹನಗಳಿಗೆ ಗುದ್ದಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾನದಲ್ಲಿ ನಡೆದಿದೆ. ಉಡುಪಿ ಡಿಎಆರ್ ವಿಭಾಗದ ಪೊಲೀಸ್ ಪೇದೆ ಪ್ರಶಾಂತ್ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ಗ್ರಾನದಲ್ಲಿನ ಕಾರ್ಯಕ್ರಮವೊಂದಕ್ಕೆ ಬಂದೋಬಸ್ತ್ ನೀಡಲು ಡಿಎಆರ್ ಸಿಬ್ಬಂದಿ ಆಗಮಿಸಿದ್ದ ವೇಳೆ ಘಟನೆ ನಡೆದಿದೆ. ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.