ಉಡುಪಿ ಕಾಲೇಜು ವಿಡಿಯೋ ಪ್ರಕರಣದ ತನಿಖೆ ಪೊಲೀಸರು ಮಾಡುತ್ತಿದ್ದಾರೆ, ಹಾಗಾಗಿ ಮಾತಾಡುವುದು ಸರಿಯಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Aug 01, 2023 | 2:43 PM

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ದೂರು ದಾಖಲಿಸಿರಲಿಲ್ಲ, ಪೊಲೀಸರೇ ಸುವೋ ಮೋಟು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಉಡುಪಿ: ಮಂಗಳೂರಿನಿಂದ ಉಡುಪಿ ಪಡುಬಿದ್ರೆ ಬೀಚ್ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಉಡುಪಿ ಕಾಲೇಜು ವಿಡಿಯೋ ಪ್ರಕರಣದಲ್ಲಿ ಬಿಜೆಪಿ ನಾಯಕರು (BJP leaders) ರಾಜಕೀಯ ಮಾಡುವ ಅವಶ್ಯಕತೆಯಿತ್ತಾ ಅಂತ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ, ಯಾರು ಬೇಕಾದರೂ ರಾಜಕೀಯ ಮಾಡಲಿ, ವಾಸ್ತವ ಸಂಗತಿಯೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ದೂರು ದಾಖಲಿಸಿರಲಿಲ್ಲ, ಪೊಲೀಸರೇ ಸುವೋ ಮೋಟು ದೂರು ದಾಖಲಿಸಿಕೊಂಡು ತನಿಖೆ (investigation) ನಡೆಸುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಡಿವೈಎಸ್ ಪಿ ಹಂತದ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆ ಇನ್ನೂ ಪೂರ್ಣಗೊಂಡಿರದ ಕಾರಣ ಅದರ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಅವರು ಬೀಚ್ ಬಳಿ ಮಾತಾಡುತ್ತಿದ್ದರಿಂದ, ಕಡಲ ಅಲೆಗಳ ಅಬ್ಬರಕ್ಕೆ ಮಾತುಗಳು ಮಾಧ್ಯಮದವರಿಗೆ ಸರಿಯಾಗಿ ಕೇಳಿಸಲಿಲ್ಲ. ಹಾಗಾಗೇ, ಸರ್ ಗಟ್ಟಿಯಾಗಿ ಮಾತಾಡಿ ಅಂತ ಅವರ ಅಂದಾಗ ಮುಖ್ಯಮಂತ್ರಿ, ಕಡಲ ಮೊರೆತದ ಸದ್ದು ಕಣ್ರಯ್ಯ ಅಂತ ಹೇಳಿ ಧ್ವನಿಯನ್ನು ಎತ್ತರಿಸಿ ಮಾತಾಡಲಾರಂಭಿಸಿದರು. ಮುಖ್ಯಮಂತ್ರಿಯೊಂದಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ