ಬಿಗ್ ಬಾಸ್ ಮನೆಯಲ್ಲಿ ರಾಜ-ಯುವರಾಣಿ ಬಂಧನ; ಮಾಡಿದ ತಪ್ಪೇನು?

Updated on: Nov 29, 2024 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನಾನಾ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಈ ವಾರದ ಟಾಸ್ಕ್ ಗಮನ ಸೆಳೆದಿದೆ. ರಾಜ ಹಾಗೂ ಯುವರಾಣಿಗೆ ಬಂಧನ ಆಗಿದೆ.

ಉಗ್ರಂ ಮಂಜು ರಾಜನಾದರೆ, ಮೋಕ್ಷಿತಾ ಪೈ ಯುವರಾಣಿ ಪಟ್ಟದಲ್ಲಿ ಇದ್ದಾರೆ. ಇವರ ಬಂಧನ ಮಾಡಿ ಬಿಗ್ ಬಾಸ್ ಆದೇಶ ಕೊಟ್ಟಿದ್ದಾರೆ. ಹಾಗಂತ ಇವರು ಯಾವುದೇ ತಪ್ಪು ಮಾಡಿಲ್ಲ. ಇವರಿಗೆ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್​ನ ಪ್ರಕಾರ ರಾಜ ಹಾಗೂ ಯುವರಾಣಿ ಬಂಧನದಲ್ಲಿ ಇರುತ್ತಾರೆ. ಇವರನ್ನು ಬಿಡುಗಡೆ ಮಾಡಲು ಅವರ ಪರ ತಂಡದವರು ಆಡಬೇಕು. ಆಡಿ ಗೆದ್ದವರಿಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More