ಉಗ್ರಂ ಮಂಜು ಜೊತೆ ಕ್ಲೋಸ್ ಆದ ಕಾವ್ಯ: ನೊಂದುಕೊಂಡ ಗಿಲ್ಲಿ ನಟ

Updated on: Nov 28, 2025 | 7:43 PM

ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿರುವ ಉಗ್ರಂ ಮಂಜು ಜೊತೆ ಕಾವ್ಯ ಶೈವ ಬಹಳ ಕ್ಲೋಸ್ ಆಗಿ ಮಾತಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟ ಹೇಗೆ ಆಡಬೇಕು ಎಂಬುದನ್ನು ಮಂಜು ವಿವರಿಸಿದ್ದಾರೆ. ಇದನ್ನು ನೋಡಿದ ಗಿಲ್ಲಿ ನಟ ಅವರಿಗೆ ಬೇಸರ ಆಗಿದೆ. ಪ್ರೋಮೋ ಇಲ್ಲಿದೆ ನೋಡಿ..

‘ಬಿಗ್ ಬಾಸ್ ಕನ್ನಡ’ 11ನೇ ಸೀಸನ್ ಸ್ಪರ್ಧಿಗಳು ಈಗ ಅತಿಥಿಗಳಾಗಿ ಮತ್ತೆ ಬಿಗ್​ ಬಾಸ್ ಮನೆಗೆ ಬಂದಿದ್ದಾರೆ. ಉಗ್ರಂ ಮಂಜು (Ugram Manju), ಮೋಕ್ಷಿತಾ ಪೈ, ರಜತ್, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಅವರು ಅತಿಥಿಗಳಾಗಿದ್ದಾರೆ. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಸ್ಪರ್ಧಿಗಳು ಉಪಚಾರ ಮಾಡಬೇಕಿದೆ. ಅತಿಥಿಯಾಗಿ ಬಂದ ಉಗ್ರಂ ಮಂಜು ಅವರು ಕಾವ್ಯ ಶೈವ ಜೊತೆ ಬಹಳ ಕ್ಲೋಸ್ ಆಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟ ಹೇಗೆ ಆಡಬೇಕು ಎಂಬುದನ್ನು ಅವರು ವಿವರಿಸಿದ್ದಾರೆ. ಇದನ್ನು ನೋಡಿದ ಗಿಲ್ಲಿ ನಟ (Gilli Nata) ಅವರಿಗೆ ಬೇಸರ ಆಗಿದೆ. ನವೆಂಬರ್ 28ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. 12ನೇ ಸೀಸನ್ ಆರಂಭ ಆದಾಗಿನಿಂದಲೂ ಕಾವ್ಯ ಮತ್ತು ಗಿಲ್ಲಿ ನಟ ಕ್ಲೋಸ್ ಆಗಿದ್ದಾರೆ. ಅವರಿಬ್ಬರ ನಡುವೆ ಆಪ್ತತೆ ಬೆಳೆದಿದೆ. ಆದರೆ ಕಾವ್ಯ ಅವರು ಬೇರೆ ಸ್ಪರ್ಧಿಗಳ ಜೊತೆ ಸ್ನೇಹ ಬೆಳೆಸಿದಾಗ ಗಿಲ್ಲಿ ನೊಂದುಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.