ದಾಳಿಗೆ ಮುಂದಾದ ಕಾಡಾನೆ: ಪ್ರವಾಸಿಗರು ಜಸ್ಟ್ ಮಿಸ್!
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಪ್ರವಾಸಿಗರು ಜೀಪ್‌ನಲ್ಲಿ ಸಫಾರಿ ಹೊರಟಿದ್ದ ವೇಳೆ ಒಂಟಿ ಸಲಗದ ಬೆನ್ನಟ್ಟಿದೆ. ಜೀಪ್ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರ ಜೀವ ಉಳಿದಿದೆ. ವಿಡಿಯೋ ನೋಡಿ.
ಚಿಕ್ಕಮಗಳೂರು, ನವೆಂಬರ್ 28: ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಬಳಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಜಂಗಲ್ ಲಾಡ್ಜ್ನವರಿಗೆ ಸೇರಿದ ಜೀಪ್‌ನಲ್ಲಿ ಪ್ರವಾಸಿಗರು ಸಫಾರಿ ಹೊರಟಿದ್ದರು. ಈ ವೇಳೆ ಭದ್ರಾ ಬಲದಂಡೆ ನಾಲೆ ಬಳಿಯ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಏಕಾಏಕಿ ಕಾಡಾನೆ ಜೀಪ್ ಅಟ್ಟಿಸಿಕೊಂಡು ಬಂದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಕಾಡಾನೆ ದಾಳಿಯಿಂದ ಪ್ರವಾಸಿಗರು ಜಸ್ಟ್ ಮಿಸ್ ಆಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 28, 2025 06:49 PM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

