ದರ್ಶನ್-ವಿಜಯಲಕ್ಷ್ಮೀ ಮದುವೆ ಆದ ಜಾಗದಲ್ಲೇ ಉಗ್ರಂ ಮಂಜು ವಿವಾಹ

Updated on: Jan 22, 2026 | 8:35 AM

ಬಿಗ್ ಬಾಸ್​​ಗೆ ತೆರಳುವ ಮೂಲಕ ಒಂದಷ್ಟು ಜನರಿಗೆ ಉಗ್ರಂ ಮಂಜು ಇಷ್ಟ ಆಗಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ. ಸಂಧ್ಯಾ ಜೊತೆ ಅವರು ಹಸಮಣೆ ಏರುತ್ತಿದ್ದಾರೆ. ಈ ಮಧ್ಯೆ ಅವರು ಮದುವೆ ವಿಷಯದಲ್ಲಿ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ರವಾರ ಅವರು ಧರ್ಮಸ್ಥಳದಲ್ಲಿ ಮದುವೆ ಆಗುತ್ತಿದ್ದಾರೆ.

ಉಗ್ರಂ ಮಂಜು ಮದುವೆಗೆ ರೆಡಿ ಆಗಿದ್ದಾರೆ. ಸಂಧ್ಯಾ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈ ದಂಪತಿ ಹಳದಿ ಶಾಸ್ತ್ರ ನೆರವೇರಿಸಿಕೊಂಡಿದ್ದಾರೆ. ಶುಕ್ರವಾರ (ಜನವರಿ 23) ಧರ್ಮಸ್ಥಳದಲ್ಲಿ ಈ ಜೋಡಿ ಮದುವೆ ಆಗುತ್ತಿದೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ದರ್ಶನ್ ಹಾಗೂ ವಿಜಯಲಕ್ಷ್ಮೀ ಕೂಡ ಧರ್ಮಸ್ಥಳದಲ್ಲಿಯೇ ಮದುವೆ ಆಗಿದ್ದರು. ಮಂಜು ಅವರ ವಿವಾಹ ಕೂಡ ಸಿಂಪಲ್ ಆಗಿ ನಡೆಯಲಿದೆ. ಕೇವಲ ಆಪ್ತರು ಮಾತ್ರ ಮದುವೆಗೆ ಹಾಜರಿ ಹಾಕಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 22, 2026 08:34 AM