Video: ಲಿವರ್‌ಪೂಲ್ ವಿಜಯೋತ್ಸವ ಪರೇಡ್ ವೇಳೆ ಜನರ ಮೇಲೆ ಹರಿದ ಕಾರು, 50ಕ್ಕೂ ಅಧಿಕ ಮಂದಿಗೆ ಗಾಯ
ಬ್ರಿಟನ್‌ನ ಲಿವರ್‌ಪೂಲ್ ನಗರದಲ್ಲಿ ಫುಟ್ಬಾಲ್ ಪ್ರೀಮಿಯರ್ ಲೀಗ್ ಟ್ರೋಫಿಯ ಗೆಲುವನ್ನು ಆಚರಿಸುತ್ತಿದ್ದ ಅಭಿಮಾನಿಗಳ ಮೇಲೆ ಕಾರೊಂದು ಹರಿದ ಪರಿಣಾಮ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಅದರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ. ಬ್ರಿಟಿಷ್ ಮಾಧ್ಯಮ ಸಂಸ್ಥೆ ದಿ ಸನ್ ವರದಿ ಮಾಡಿರುವ ಪ್ರಕಾರ, 27 ಮಂದಿ ಗಾಯಗೊಂಡವರನ್ನು ನಾಲ್ಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ 20 ಜನರಿಗೆ ಚಿಕಿತ್ಸೆ ನೀಡಲಾಯಿತು.
ಯುಕೆ: ಬ್ರಿಟನ್‌ನ ಲಿವರ್‌ಪೂಲ್ ನಗರದಲ್ಲಿ ಫುಟ್ಬಾಲ್ ಪ್ರೀಮಿಯರ್ ಲೀಗ್ ಗೆಲುವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳ ಮೇಲೆ ಕಾರೊಂದು ಹರಿದ ಪರಿಣಾಮ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಅದರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ. ಬ್ರಿಟಿಷ್ ಮಾಧ್ಯಮ ಸಂಸ್ಥೆ ದಿ ಸನ್ ವರದಿ ಮಾಡಿರುವ ಪ್ರಕಾರ, ಗಾಯಗೊಂಡವರು ನಾಲ್ಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ 20 ಜನರಿಗೆ ಚಿಕಿತ್ಸೆ ನೀಡಲಾಯಿತು.
ಇದು ಭಯೋತ್ಪಾದಕ ದಾಳಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಲಿವರ್‌ಪೂಲ್ ನಗರದಲ್ಲಿರುವ ವಾಟರ್ ಸ್ಟ್ರೀಟ್‌ನಲ್ಲಿ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ ಪ್ರೀಮಿಯರ್ ಲೀಗ್ ಪ್ರಶಸ್ತಿ ವಿಜಯವನ್ನು ಆಚರಿಸಲಾಗುತ್ತಿತ್ತು. ಅದೇ ಸಮಯದಲ್ಲಿ, ಒಂದು ಕಾರು ಜನಸಮೂಹದ ಮೇಲೆ ನುಗ್ಗಿತ್ತು. ಲಿವರ್ ಪೂಲ್ ಫುಟ್ ಬಾಲ್ ಕ್ಲಬ್, ಇಂಗ್ಲೆಂಡ್ ನ 20 ನೆಯ ಶತಮಾನದ ಅತಿ ಯಶಸ್ವಿ ಕ್ಲಬ್.ಲಿವರ್ ಪೂಲ್ ಜಂಟಿಯಾಗಿ ಲೀಗ್ ಪ್ರಶಸ್ತಿಗಳನ್ನು 18 ಬಾರಿ ಗೆದ್ದು ದಾಖಲೆ ನಿರ್ಮಿಸಿದೆ, ಏಳು ಫೆಡರೇಷನ್ ಏಷ್ಯಾ ಕಪ್ ಗಳನ್ನು ಗೆದ್ದಿದೆ ಮತ್ತು ಏಳು ಲೀಗ್ ಕಪ್ ಗಳನ್ನು ಗೆದ್ದು ಮತ್ತೊಂದು ದಾಖಲೆ ನಿರ್ಮಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

