ನಿರ್ಮಾಪಕ-ನಿರ್ದೇಶಕ ಇದ್ರೆ ಮಾತ್ರ ಸ್ಟಾರ್ ಹುಟ್ಟುತ್ತಾನೆ; ಉಮಾಪತಿ ಶ್ರೀನಿವಾಸ್
ಉಮಾಪತಿ ಶ್ರೀನಿವಾಸ್ ಅವರಿಗೆ ಒಂದಲ್ಲ ಎರಡಲ್ಲ ಸಿನಿಮಾಗೆ ಅವಾರ್ಡ್ ಬಂದಿದೆ. ಈ ಅವಾರ್ಡ್ನ ಅವರು ಸ್ವೀಕರಿಸಿ ಗಮನ ಸೆಳೆದರು. ಈಗ ಅವರು ಸಿನಿಮಾ ಬಗ್ಗೆ ಮಾತನಾಡಿದರು. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡರು. ಅವರು ದರ್ಶನ್ಗೆ ಟಾಂಗ್ ಕೊಟ್ಟರು ಎಂದು ಹೇಳಲಾಗುತ್ತಾ ಇದೆ.
ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು ಮತ್ತು ಈ ಬಾಂಧವ್ಯ ಈಗ ದೂರವಾಗಿದೆ. ಹೀಗಾಗಿ, ಆಗಾಗ ಒಬ್ಬರಿಗೊಬ್ಬರು ಟಾಂಗ್ ಕೊಟ್ಟುಕೊಳ್ಳುತ್ತಲೇ ಇದ್ದರು. ಈಗ ಉಮಾಪತಿ ಶ್ರೀನಿವಾಸ್ ಅವರು ಒಂದು ವಿಷಯ ಹೇಳಿದ್ದಾರೆ. ‘ನಿರ್ಮಾಪಕರು ಇದ್ರೆ ಒಂದು ಸಿನಿಮಾ ಮಾತ್ರ ಆಗುತ್ತದೆ ಎಂದು ಒಬ್ಬರು ಹೇಳಿದ್ದರು. ನಿರ್ಮಾಪಕರು ಹಾಗೂ ನಿರ್ದೇಶಕರು ಇದ್ದರೆ ಮಾತ್ರ ಸ್ಟಾರ್ ಹುಟ್ಟೋದು’ ಎಂದು ಉಮಾಪತಿ ಹೇಳಿದ್ದಾರೆ. ಇದು ದರ್ಶನ್ಗೆ ಹೇಳಿದ ಮಾತು ಎಂದು ಅನೇಕರು ಊಹಿಸುತ್ತಿದ್ದಾರೆ. ದರ್ಶನ್ಗೆ ಒಳ್ಳೆಯದಾಗಲಿ ಎಂದು ಉಮಾಪತಿ ಹಾರೈಸಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
