ಬೆಂಗಳೂರು: ರಸ್ತೆ ಮೇಲೆ ಕುಡಿದು ತೂರಾಡುತ್ತಿದ್ದ ವ್ಯಕ್ತಿ ಕೈಯಲ್ಲಿದ್ದ ಬ್ಯಾಗ್ಗಳಲ್ಲಿ ರೂ. 22 ಲಕ್ಷ ನಗದು ಮತ್ತು ಒಂದೂವರೆ ಕೇಜಿ ಚಿನ್ನ!
ಅವನ ಚಲನವಲನಗಳನ್ನು ಗಮನಿಸಿ ಪೊಲೀಸರು ಹಿಂಬಾಲಿಸಿದಾಗ ವಿಚಲಿತನಾಗಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಆದರೆ ಸಾಧ್ಯವಾಗಿಲ್ಲ.
ಬೆಂಗಳೂರು: ಒಂದು ಬ್ಯಾಗಲ್ಲಿ ರೂ 22 ಲಕ್ಷ ನಗದು ಮತ್ತೊಂದು ಬ್ಯಾಗಲ್ಲಿ ಒಂದು ಮುಕ್ಕಾಲು ಕೇಜಿಯಷ್ಟು ಚಿನ್ನಾಭರಣ ಮತ್ತು ಚಿನ್ನದ ಬಿಸ್ಕಿಟ್ ಗಳನ್ನು (gold biscuits) ಇಟ್ಟುಕೊಂಡಿದ್ದಾಗ್ಯೂ ಕಂಠಮಟ್ಟ ಕುಡಿದು ರಸ್ತೆಯ ಮೇಲೆ ತೂರಾಡುತ್ತಾ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಎಸ್ ಜೆ ಪಾರ್ಕ್ ಪೊಲೀಸರು (SJ Park police) ಬಂಧಿಸಿದ್ದಾರೆ. ಅವನ ಚಲನವಲನಗಳನ್ನು (movements) ಗಮನಿಸಿ ಪೊಲೀಸರು ಹಿಂಬಾಲಿಸಿದಾಗ ವಿಚಲಿತನಾಗಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಆದರೆ ಸಾಧ್ಯವಾಗಿಲ್ಲ. ಬ್ಯಾಗ್ ಗಳಲ್ಲಿದ್ದ ದಾಖಲೆಯಿಲ್ಲದ ಹಣ ಮತ್ತು ಚಿನ್ನ ಕಂಡು ಪೊಲೀಸರು ಹೌಹಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Nov 30, 2022 02:10 PM
Latest Videos