Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಚಿಕ್ಕ ಮಕ್ಕಳಿಗೆ ಜಾತಕ ಬರೆಸಬಹುದಾ? ಇಲ್ಲಿದೆ ಉತ್ತರ

Daily Devotional: ಚಿಕ್ಕ ಮಕ್ಕಳಿಗೆ ಜಾತಕ ಬರೆಸಬಹುದಾ? ಇಲ್ಲಿದೆ ಉತ್ತರ

ವಿವೇಕ ಬಿರಾದಾರ
|

Updated on: Dec 16, 2024 | 7:33 AM

ಜಾತಕವು ವ್ಯಕ್ತಿಯ ಜ್ಯೋತಿಷ್ಯ ನಕ್ಷೆಯಾಗಿದ್ದು, ಗ್ರಹಗಳ ಸ್ಥಾನ, ಚಲನೆ ಮತ್ತು ಸಂಯೋಗಗಳನ್ನು ವಿವರಿಸುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವ, ಸಂಬಂಧಗಳು ಮತ್ತು ಜೀವನದ ಪ್ರಮುಖ ಘಟನೆಗಳನ್ನು ಊಹಿಸಲು ಸಹಾಯ ಮಾಡುತ್ತದೆ. 12 ಮನೆಗಳನ್ನು ಒಳಗೊಂಡ ಜಾತಕವು ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ಪ್ರತಿನಿಧಿಸುತ್ತದೆ. ಚಿಕ್ಕ ಮಕ್ಕಳ ಜಾತಕದ ಬಗ್ಗೆಯೂ ಚರ್ಚಿಸಲಾಗಿದೆ.

ಜಾತಕ ಎಂದರೆ, ವ್ಯಕ್ತಿಯ ಜ್ಯೋತಿಷ್ಯ ನಕ್ಷೆ. ಜಾತಕದಲ್ಲಿ, ಗ್ರಹಗಳ ಸ್ಥಾನ, ಚಲನೆ, ಸಂಯೋಗ, ಗುಣಲಕ್ಷಣ, ದೋಷ ಮುಂತಾದವುಗಳ ಮಾಹಿತಿ ಇರುತ್ತದೆ. ಜಾತಕದ ಮೂಲಕ, ವ್ಯಕ್ತಿಯ ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಜಾತಕದಲ್ಲಿ 12 ಮನೆಗಳಿರುತ್ತವೆ.ಜಾತಕದಲ್ಲಿರುವ 12 ಮನೆಗಳು ಇರುತ್ತವೆ. ಜಾತಕದ ಮೊದಲನೇ ಮನೆ, ವ್ಯಕ್ತಿಯ ಬಾಹ್ಯ ನೋಟ, ವರ್ತನೆಯನ್ನು ಸೂಚಿಸುತ್ತದೆ. ಏಳನೇ ಮನೆ, ಮದುವೆ, ಸಂಬಂಧಗಳ ಬಗ್ಗೆ ಹೇಳುತ್ತದೆ. ಪ್ರತಿಯೊಂದು ಮನೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಜಾತಕವನ್ನು ನಿರ್ದಿಷ್ಟ ಲೆಕ್ಕಾಚಾರಗಳ ಆಧಾರದಲ್ಲಿ ಬರೆಯಲಾಗುತ್ತದೆ. ಚಿಕ್ಕ ಮಕ್ಕಳಿಗೆ ಜಾತಕ ಬರೆಸಬಹುದಾ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.