ಬೆಂಗಳೂರು: ಇಡೀ ಮೊಬೈಲ್ ಅಂಗಡಿಯನ್ನೇ ದೋಚಿದ ಖದೀಮರು! ವಿಡಿಯೋ ನೋಡಿ
ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿಯನ್ನು ದರೋಡೆ ಮಾಡಲಾಗಿದೆ. ದರೋಡೆಕೋರರು 55 ಮೊಬೈಲ್ ಫೋನ್‌ಗಳು ಮತ್ತು 2 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳು ದರೋಡೆಯನ್ನು ದೃಢೀಕರಿಸುತ್ತವೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಡಿಸೆಂಬರ್ 16: ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೆಷನ್ ಎಂಬ ಹೆಸರಿನ ಮೊಬೈಲ್ ಅಂಗಡಿಯನ್ನು ಖತರ್ನಾಕ್ ಖದೀಮರು ದೋಚಿದ್ದಾರೆ. ಖದೀಮರು ಎರಡು ಲಕ್ಷ ರೂಪಾಯಿ ನಗದು ಹಾಗೂ ಮೂರು ಲಕ್ಷ ಮೌಲ್ಯದ 55 ಮೊಬೈಲ್ ಫೋನ್ಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಅಂಗಡಿ ದೋಚುವ ದೃಶ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ಡಿಸೆಂಬರ್ 11ರ ಬೆಳಗಿನ ಜಾವ 3.25ರ ಸುಮಾರಿಗೆ ಶೆಟರ್ ಮುರಿದು ಒಳಗೆ ನುಗ್ಗಿದ ಇಬ್ಬರು ಮಾಸ್ಕ್ ಧರಿಸಿದ ವ್ಯಕ್ತಿಗಳು ಅಂಗಡಿಯಲ್ಲಿದ್ದ ಸುಮಾರು 55 ಮೊಬೈಲ್ ಫೋನ್ಗಳನ್ನು ಚೀಲಕ್ಕೆ ತುಂಬಿಕೊಂಡಿದ್ದಾರೆ. ಬಳಿಕ ಡ್ರಾನಲ್ಲಿ ಇಟ್ಟಿದ್ದ ಎರಡು ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಪ್ರದೀಪ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos