ಸಮವಸ್ತ್ರ ಸಂಘರ್ಷ: ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಬಂದ್ ಆಚರಿಸಿದ ಹಿಂದೂ-ಪರ ಸಂಘಟನೆಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 09, 2022 | 5:15 PM

ಬಂದ್ ಕರೆಗೆ ನೀಡಿದ ಸಂಘಟನೆಗಳು ವೈಭವ್ ಚಿತ್ರಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಱಲಿ ನಡೆಸಿದರು. ಅಲ್ಲಿಯವರೆಗೆ ಎಲ್ಲವೂ ಶಾಂತಿಯುತವಾಗಿತ್ತು. ಆದರೆ ಱಲಿ ಕೊನೆಗೊಂಡ ಬಳಿಕ ಕೆಲ ಕಿಡಿಗೇಡಿಗಳು ದಾಂಧಲೆ ಶುರುಮಾಡಿದರು. ದೊಂಬಿ ನಡೆಸಿದವರ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಮವಸ್ತ್ರ ಸಂಘರ್ಷ ತಾರಕಕ್ಕೇರಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಅವಳಿ ಪಟ್ಟಣಗಳಲ್ಲಿ ಬುಧವಾರ ಹಿಂದೂಪರ ಸಂಘಟನೆಗಳು (Pro-Hindu organisations) ಬಂದ್ ಗಾಗಿ (Bandh) ಕರೆ ನೀಡಿದ್ದರಿಂದ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿರುವುದನ್ನು ವಿಡಿಯೋನಲ್ಲಿ ನೀವು ನೋಡಬಹುದು. ಊರು ಬಂದಾದರೇನು, ಭಾರತ್ ಬಂದ್ (Bharat Bandh) ಅದರೇನು ಪೊಲೀಸರಿಗೆ ತಮ್ಮ ಕರ್ತವ್ಯ ನಿರ್ವಹಿಸುವುದು ತಪ್ಪಲಾರದು. ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುವವರು ಬಂದ್ ನಲ್ಲಿ ಸಿಕ್ಹಾಕಿಕೊಂಡೆ, ಪ್ರತಿಭಟನೆಕಾರರು ಕಚೇರಿಗೆ ಬರಲು ಬಿಡಲಿಲ್ಲ ಅಂತ ಹೇಳಿದರೆ ನಡೆದೀತು, ಅದರೆ ಪೊಲೀಸ್ ಇಲಾಖೆಯಲ್ಲಿ (police department) ದುಡಿಯುವವರು ಹಾಗೆ ಹೇಳುವುದು ಸಾಧ್ಯವಿಲ್ಲ ಮಾರಾಯ್ರೇ. ಅಸಲಿಗೆ ಬಂದ್ ನಂಥ ಸಂದರ್ಭಗಳಲ್ಲಿ ಅವರ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ.

ಬಾಗಲಕೋಟೆ ಟಿವಿ9 ವರದಿಗಾರ ನಮಗೆ ನೀಡಿರುವ ಮಾಹಿತಿ ಪ್ರಕಾರ ಬಂದ್ ಕರೆಗೆ ನೀಡಿದ ಸಂಘಟನೆಗಳು ವೈಭವ್ ಚಿತ್ರಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಱಲಿ ನಡೆಸಿದರು. ಅಲ್ಲಿಯವರೆಗೆ ಎಲ್ಲವೂ ಶಾಂತಿಯುತವಾಗಿತ್ತು. ಆದರೆ ಱಲಿ ಕೊನೆಗೊಂಡ ಬಳಿಕ ಕೆಲ ಕಿಡಿಗೇಡಿಗಳು ದಾಂಧಲೆ ಶುರುಮಾಡಿದರು. ದೊಂಬಿ ನಡೆಸಿದವರ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಮವಸ್ತ್ರಕ್ಕೆ ಸಂಬಂಧಿಸಿದ ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಬುಧವಾರ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದು ವಿವಾದ ಅಂತ್ಯ ಕಾಣುತ್ತದೆ ಎಂದು ಭಾವಿಸಿದ್ದ ಕನ್ನಡಿಗರಿಗೆ ಆತಂಕ ಉಂಟಾಗಿದೆ. ವಿಸ್ತೃತ ಪೀಠ ರಚನೆಯಾಗಿ ವಿಚಾರಣೆ ನಡೆಸಿ ತೀರ್ಪು ಹೊರಬೀಳುವವರೆಗೆ ಸಮಯ ಹಿಡಿಯುತ್ತೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನೆತ್ತಿಯ ಮೇಲಿವೆ. ಎರಡೂ ಬಣಗಳನ್ನು ಸಮಾಧಾನಪಡಿಸಿ ಶಾಲಾ ಕಾಲೇಜುಗಳು ಎಂದಿನ ಹಾಗೆ ನಡೆಯುವಂತೆ ಮಾಡುವುದು ಸಾಧ್ಯವಾಗುತ್ತಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಹಿಂದೆ ಯಾವತ್ತೂ ಇಲ್ಲದಷ್ಟು ಚಿಂತಿತರಾಗಿದ್ದಾರೆ.

ಇದನ್ನೂ ಓದಿ:   ಸಮವಸ್ತ್ರ ಸಂಘರ್ಷ ಪ್ರಕರಣ; ಬಾಗಲಕೋಟೆ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದ ವಿಡಿಯೋ ವೈರಲ್