Union Budget 2022: ಕೇಂದ್ರ ಬಜೆಟ್ 2022ರಿಂದ ವ್ಯಾಪಾರ ವರ್ಗದ ನಿರೀಕ್ಷೆಗಳೇನು?

| Updated By: Srinivas Mata

Updated on: Jan 24, 2022 | 2:31 PM

ಸ್ವ ಉದ್ಯೋಗಿಗಳು, ವ್ಯಾಪಾರಿ ವರ್ಗ ಹಾಗೂ ಅಸಂಘಟಿತ ವಲಯವು ಕೇಂದ್ರ ಬಜೆಟ್ 2022ರಿಂದ ಏನನ್ನು ನಿರೀಕ್ಷೆ ಮಾಡುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಎಲ್ಲರಿಗೂ ಉದ್ಯೋಗ ದೊರಕಿಸುವಂತೆ ಮಾಡುವುದು ಯಾವುದೇ ಸರ್ಕಾರಕ್ಕೂ ಅಸಾಧ್ಯದ ಮಾತು. ಆದರೆ ಸ್ವ ಉದ್ಯೋಗದ ಮೂಲಕ ತಾವು ಬದುಕುವ ದಾರಿ ಕಂಡುಕೊಂಡು, ಇತರರನ್ನೂ ಅದರಲ್ಲಿ ಒಳಗೊಂಡರೆ ಯಾವುದೇ ದೇಶ, ಸರ್ಕಾರದ ಮೇಲೆ ಬೀಳುವ ಹೊರೆ ಕಡಿಮೆ ಆಗುತ್ತದೆ. ಕೊವಿಡ್- 19 ಹಿಂದಿನ ಅವಧಿ ತನಕ ಈ ರೀತಿ ಸ್ವ-ಉದ್ಯೋಗ, ವ್ಯಾಪಾರದಿಂದ ಹೇಗೋ ಜೀವನ ನಡೆಸಿಕೊಂಡು ಹೋಗುತ್ತಿದ್ದವರು ಮತ್ತು ಇತರರಿಗೆ ಕೆಲಸ ನೀಡಿದವರು ಲಕ್ಷಲಕ್ಷಗಳಲ್ಲಿ ಇದ್ದರು. ಆದರೆ ಯಾವಾಗ ಕೊರೊನಾ ಅಪ್ಪಳಿಸಿತೋ ಆಗಿನಿಂದ ಸ್ವ-ಉದ್ಯೋಗಿಗಳು, ಸಣ್ಣ-ಪುಟ್ಟ ಸಂಸ್ಥೆಗಳು, ಆತಿಥ್ಯ, ಹೋಟೆಲ್, ರೆಸ್ಟೋರೆಂಟ್​ಗಳಂಥವನ್ನು ನಡೆಸುತ್ತಿದ್ದವರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ರೀತಿಯ ಅಸಂಘಟಿತ ವಲಯದಲ್ಲಿ ಕೆಲಸ ಕಂಡುಕೊಂಡು, ಆದಾಯ ಪಡೆಯುತ್ತಿದ್ದವರು ಹಲವರು ತಮ್ಮೂರಿನ ದಾರಿ ಹಿಡಿದರೆ, ಇನ್ನೂ ಹಲವರು ತಮ್ಮ ಸಂಕಷ್ಟದ ಸ್ಥಿತಿಯ ಜತೆಗೆ ಹೆಣಗುತ್ತಲೇ ಇದ್ದಾರೆ. ಸರ್ಕಾರದ ಪ್ಯಾಕೇಜ್​ಗಳು ಸಹ ಇವರ ಪಾಲಿಗೆ ದೊರೆಯುವುದು ಕಷ್ಟ. ಹೇಗೋ ವರ್ಕಿಂಗ್​ ಕ್ಯಾಪಿಟಲ್ ಹೊಂದಿಸಿಕೊಂಡು ಶುರು ಮಾಡಿದ ಉದ್ಯಮಗಳು ಮತ್ತೆ ಮತ್ತೆ ಪೆಟ್ಟು ತಿನ್ನುತ್ತಿವೆ. ಇಂಥ ಸನ್ನಿವೇಶದಲ್ಲಿ ಕೇಂದ್ರ ಬಜೆಟ್ 2022ರಿಂದ ಸ್ವ-ಉದ್ಯೋಗಿಗಳು, ಅಸಂಘಟಿತ ವಲಯ ಏನನ್ನು ನಿರೀಕ್ಷಿಸಬಹುದು ಎಂಬ ಮಾಹಿತಿಯ ವಿಡಿಯೋ ನಿಮ್ಮೆದುರು ಇದೆ.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್​ 2022ರಿಂದ ವಲಸೆ ಕಾರ್ಮಿಕರ ನಿರೀಕ್ಷೆಗಳೇನು?

Follow us on