ನೀವು ಕೈ ಇಟ್ಟಲ್ಲೆಲ್ಲಾ ಯಶಸ್ಸು ಸಿಗುತ್ತೆ; ರಾಮೇಶ್ವರಕ್ಕೆ ಹೊರಟಿದ್ದ ಸಾಧುಗಳಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಶೀರ್ವಾದ
ಕಾರ್ಯಕರ್ತರ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ನಾಲ್ವರು ಸಾಧುಗಳು ದಿಢೀರನೆ ಹೋಟೆಲ್ ಆವರಣದೊಳಗೆ ಪ್ರವೇಶಿಸಿದರು. ನೀವು ಕೈ ಇಟ್ಟಲ್ಲೆಲ್ಲಾ ಯಶಸ್ಸು ಸಿಗುತ್ತೆ ಅಂತಾ ಸಾಧುಗಳು ಆಶೀರ್ವದಿಸಿದರು.
ಬೆಳಗಾವಿ: ಕಾಶಿಯಿಂದ ರಾಮೇಶ್ವರಕ್ಕೆ ಹೊರಟಿದ್ದ ಸಾಧುಗಳು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ (Lakshmi Hebbalkar) ಆಶೀರ್ವಾದ ಮಾಡಿದರು. ಬೆಳಗಾವಿಯ (Belagavi) ಖಾಸಗಿ ಹೊಟೆಲ್ ಆವರಣದಲ್ಲಿ ನಿಂತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಾಧುಗಳು ಆಶೀರ್ವಾದ ಮಾಡಿದ್ದಾರೆ. ಕಾರ್ಯಕರ್ತರ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ನಾಲ್ವರು ಸಾಧುಗಳು ದಿಢೀರನೆ ಹೋಟೆಲ್ ಆವರಣದೊಳಗೆ ಪ್ರವೇಶಿಸಿದರು. ನೀವು ಕೈ ಇಟ್ಟಲ್ಲೆಲ್ಲಾ ಯಶಸ್ಸು ಸಿಗುತ್ತೆ ಅಂತಾ ಸಾಧುಗಳು ಆಶೀರ್ವದಿಸಿದರು. ನಂತರ ಸಾಧುಗಳಿಗೆ ಎರಡು ಸಾವಿರ ರೂಪಾಯಿ ನೋಟು ನೀಡಿ ಲಕ್ಷ್ಮೀ ಧನ್ಯವಾದ ಹೇಳಿದರು.
ಬಳಿಕ ನಿಮ್ಮ ಹೆಸರು ಏನು ಯಾವ ಕ್ಷೇತ್ರದ ಎಂಎಲ್ಎ ಎಂದು ಸಾಧುಗಳು ಪ್ರಶ್ನಿಸುತ್ತಾರೆ. ಅದಕ್ಕೆ ಲಕ್ಷ್ಮೀ ಅಂತಾ ಹೆಸರು ಬೆಳಗಾವಿ ಗ್ರಾಮೀಣ ಎಂಎಲ್ಎ ಎಂದು ಪರಿಚಯ ಮಾಡಿಕೊಂಡರು.
ಇದನ್ನೂ ಓದಿ
ಹೇ ನಾಗರಾಜ್, ಇಮ್ಮಿಡಿಯಟ್ ಆರ್ಡರ್ ಮಾಡು: ಸಚಿವ ಎಂಟಿಬಿ ನಾಗರಾಜ್ ಜೊತೆ ಸಿದ್ದರಾಮಯ್ಯ ಖಡಕ್ ಮಾತು
ಹನಿಮೂನ್ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್; ಮಾಲ್ಡೀವ್ಸ್ ನನ್ನ ಹ್ಯಾಪಿ ಪ್ಲೇಸ್ ಎಂದ ನಟಿ