Budget 2023: ಸರ್ಕಾರಕ್ಕೆ ಯಾಕೆ ನಿರೀಕ್ಷಿತ ಆದಾಯ ಯಾಕೆ ಬರಲ್ಲ? ಇಲ್ಲಿದೆ ಮಾಹಿತಿ

|

Updated on: Jan 28, 2023 | 7:22 PM

ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬಾರದೇ ಇದ್ದಾಗ ಅದು ಕೊರತೆ ಬಜೆಟ್​ಗೆ ಕಾರಣವಾಗುತ್ತದೆ. ಹಾಗಿದ್ದರೆ ಸರ್ಕಾರಕ್ಕೆ ಯಾಕೆ ನಿರೀಕ್ಷಿತ ಆದಾಯ ದೊರೆಯುವುದಿಲ್ಲ? ಇಲ್ಲಿದೆ ಮಾಹಿತಿ.

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ಕೊರತೆ ಬಜೆಟ್​​​ ಮಂಡನೆಯಾಗುವ ಸಂದರ್ಭಗಳೇ ಹೆಚ್ಚಿರುತ್ತದೆ. ಖರ್ಚು ಹೆಚ್ಚಾಗಿ ಆದಾಯ ಕಡಿಮೆ ಇದ್ದಾಗ ಅದನ್ನು ಕೊರತೆ ಬಜೆಟ್ ಎಂದು ಕರೆಯಲಾಗುತ್ತದೆ. ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬಾರದೇ ಇದ್ದಾಗ ಅದು ಕೊರತೆ ಬಜೆಟ್​ಗೆ ಕಾರಣವಾಗುತ್ತದೆ. ಹಾಗಿದ್ದರೆ ಸರ್ಕಾರಕ್ಕೆ ಯಾಕೆ ನಿರೀಕ್ಷಿತ ಆದಾಯ ದೊರೆಯುವುದಿಲ್ಲ? ಈ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ‘ಸ್ಟಾಕ್​ಬೈಟ್​​’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು.