ಕೇಂದ್ರ ಸಚಿವ ಬಂದರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಸಿಬ್ಬಂದಿ, ಬೇಸರದಿಂದಲೇ ಹೊರಟ ಕುಮಾರದಸ್ವಾಮಿ

|

Updated on: Jul 28, 2024 | 12:13 PM

ಇತ್ತೀಚೆಗಷ್ಟೇ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜನತಾ ದರ್ಶನ ಮಾಡಿದ್ದರು. ಆದ್ರೆ, ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ಜನತಾ ದರ್ಶನದಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಕುಮಾರಸ್ವಾಮಿ ಬಂದರೂ ಸಹ ಅಧಿಕಾರಿಗಳು ನಂಜನಗೂಡು ಪ್ರವಾಸಿದ ಬೀಗ ತೆಗೆದಿಲ್ಲ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನಡುವಿನ ದ್ವೇಷ ರಾಜಕೀಯ ಮುಂದುವರಿದಂತಾಗಿದೆ.

ಮೈಸೂರು, (ಜುಲೈ 28): ನಂಜನಗೂಡು (Nanjangud) ಪ್ರವಾಸಿ ಮಂದಿರವನ್ನು (Pravasi mandira) ನಿರ್ವಹಣೆ ಮಾಡುವ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಇಂದು ನಂಜನಗೂಡು ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿ ಪಡೆಯಲು ಆಗಮಿಸಿದ್ದಾರೆ. ಆದ್ರೆ, ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಪ್ರವಾಸಿ ಮಂದಿರದ ಹೊರ ಭಾಗ ಕಾರಿನಲ್ಲೇ ಕುಳಿತ ಎಚ್‌ಡಿಕೆ 10 ನಿಮಿಷ ಕಾದರೂ ಯಾವೊಬ್ಬ ಸಿಬ್ಬಂದಿ ಬಂದಿರಲಿಲ್ಲ. ಕೊನೆಗೆ ಕುಮಾರಸ್ವಾಮಿ ಕಾರಿನ ಮೂಲಕ ತೆರಳಿದ್ದಾರೆ.

ಎಚ್‌ಡಿಕೆ ಭೇಟಿ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು ಮತ್ತು ಪ್ರವಾಸ ಪಟ್ಟಿಯನ್ನು ಸಚಿವಾಲಯದ ಸಿಬ್ಬಂದಿ ಬಿಡುಗಡೆ ಮಾಡಿದ್ದರು. ಆದರೂ ಸಹ ನಂನಜಗೂಡು ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿದೆ. ಇನ್ನು ಪ್ರವಾಸಿ ಮಂದಿರದ ಬಾಗಿಲು ತೆರೆಯದ್ದಕ್ಕೆ ಕಾರಿನಲ್ಲಿದ್ದ ಮಾಜಿ ಸಚಿವ ಸಾ.ರಾ. ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನಡುವಿನ ದ್ವೇಷ ರಾಜಕೀಯ ಮುಂದುವರಿದಂತಾಗಿದೆ.

Published on: Jul 28, 2024 12:12 PM