ಅನಂತಕುಮಾರ ಹೆಗಡೆಯನ್ನು ಸಮರ್ಥಿಸುವ ಪ್ರಲ್ಹಾದ್ ಜೋಶಿ ಸಹ ಅದೇ ಸಂಸ್ಕೃತಿಯವರು: ಸಿದ್ದರಾಮಯ್ಯ
ಅಸಲಿಗೆ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ಹೆಗಡೆ, ಈಗ ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಇಂಥ ಹೇಳಿಕೆಗಳನ್ನು ನೀಡಿ ಜನನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅಂಥ ವ್ಯಕ್ತಿಯ ಹೇಳಿಕೆಯನ್ನು ಪ್ರಲ್ಹಾದ್ ಜೋಶಿ ಸಮರ್ಥಿಸುತ್ತಾರೆಂದರೆ, ಅವರಿಗೂ ಸಂಸ್ಕೃತಿ ಇಲ್ಲವೆನ್ನೋದು ಸ್ಪಷ್ಟವಾಗುತ್ತದೆ, ಸಂಸ್ಕೃತಿ ಅಂದರೆ ಮನುಷ್ಯತ್ವ ಎಂದರು.
ಹಾವೇರಿ: ಸಾಮೂಹಿಕ ಅತ್ಯಾಚಾರ ಮತ್ತು ನೈತಿಕ ಪೊಲೀಸ್ ಗಿರಿ (rape and moral policing) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಸಂತ್ರಸ್ತರಿಂದ ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು. ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ (Anantkumar Hegde) ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದನ್ನು ಸಮರ್ಥಿಸಿ, ಏಕವಚನದಲ್ಲಿ ಮಾತಾಡುವುದು ಸಿದ್ದರಾಮಯ್ಯನವರೇ ಜಾರಿಮಾಡಿರುವ ಪರಿಪಾಠ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಒಬ್ಬ ಸಂಸದ ಮತ್ತು ಮಾಜಿ ಕೇಂದ್ರ ಸಚಿವನಾಗಿ ಹೆಗಡೆ ಕ್ಷೇತ್ರಕ್ಕೆ ನೀಡಿರುವುದು ಶೂನ್ಯ ಕೊಡುಗೆ, ಅವರಿಗೆ ಕ್ಷೇತ್ರದ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಹೇಳಿ, ಅಸಲಿಗೆ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದವರು, ಈಗ ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಇಂಥ ಹೇಳಿಕೆಗಳನ್ನು ನೀಡಿ ಜನನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಅಂಥ ವ್ಯಕ್ತಿಯ ಹೇಳಿಕೆಯನ್ನು ಪ್ರಲ್ಹಾದ್ ಜೋಶಿ ಸಮರ್ಥಿಸುತ್ತಾರೆಂದರೆ, ಅವರಿಗೂ ಸಂಸ್ಕೃತಿ ಇಲ್ಲವೆನ್ನೋದು ಸ್ಪಷ್ಟವಾಗುತ್ತದೆ, ಸಂಸ್ಕೃತಿ ಅಂದರೆ ಮನುಷ್ಯತ್ವ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ