ಇಂಡಿಗೋ ಈ ಸ್ಥಿತಿಗೆ ಬರಲು ಕಾರಣ ಯಾರು? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು

Updated on: Dec 07, 2025 | 6:25 PM

ಇಂಡಿಗೋ ವಿಮಾನಯಾನ ಸಂಸ್ಥೆ ಸೃಷ್ಟಿಸಿದ್ದ ಈ ನರಕಯಾನ, ಆರನೇ ದಿನವಾದ ಇಂದು ಕೊಂಚ ಸುಧಾರಿಸಿದೆ. ಆದ್ರೆ ಇಂಡಿಗೋದ ಎಲ್ಲಾ ವಿಮಾನಗಳು ಇಂದು ಕೂಡಾ ಹಾರಿಲ್ಲ. ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಿಂದ ಹಾರಬೇಕಾಗಿದ್ದ ಸುಮಾರು 61 ಇಂಡಿಗೋ ವಿಮಾನಗಳು ಇಂದೂ ಕೂಡಾ ಹಾರಾಡದೇ ನಿಂತಲ್ಲೇ ನಿಂತಿದೆ. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ, ಕೋಲ್ಕತ್ತಾ, ಮಂಗಳೂರು, ಕೊಚ್ಚಿ, ಶ್ರೀನಗರ, ಭೋಪಾಲ್ ಸೇರಿ, ದೇಶದ ವಿವಿಧೆಡೆ ತೆರಳಬೇಕಿದ್ದ ಕೆಲ ವಿಮಾನಗಳ ಹಾರಾಟ ರದ್ದಾಗಿವೆ. ಇದರಿಂದ ಬೇರೆ ಬೇರೆ ಕಡೆ ತೆರಳಲು ಮೊದಲೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ರದ್ದಾಗಿದ್ದರಿಂದ ಇಂಡಿಗೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಇಂಡಿಗೋ ಈ ಸ್ಥಿತಿಗೆ ಕಾರಣ ಯಾರು ಎನ್ನುವ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನು ಕೆಲವರು ಕೇಂದ್ರ ಸರ್ಕಾರವೇ ಇದಕ್ಕೆ ನೇರ ಕಾರಣ ಎಂದು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿ, (ಡಿಸೆಂಬರ್ 07): ಇಂಡಿಗೋ ವಿಮಾನಯಾನ ಸಂಸ್ಥೆ ಸೃಷ್ಟಿಸಿದ್ದ ಈ ನರಕಯಾನ, ಆರನೇ ದಿನವಾದ ಇಂದು ಕೊಂಚ ಸುಧಾರಿಸಿದೆ. ಆದ್ರೆ ಇಂಡಿಗೋದ ಎಲ್ಲಾ ವಿಮಾನಗಳು ಇಂದು ಕೂಡಾ ಹಾರಿಲ್ಲ. ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಿಂದ ಹಾರಬೇಕಾಗಿದ್ದ ಸುಮಾರು 61 ಇಂಡಿಗೋ ವಿಮಾನಗಳು ಇಂದೂ ಕೂಡಾ ಹಾರಾಡದೇ ನಿಂತಲ್ಲೇ ನಿಂತಿದೆ. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ, ಕೋಲ್ಕತ್ತಾ, ಮಂಗಳೂರು, ಕೊಚ್ಚಿ, ಶ್ರೀನಗರ, ಭೋಪಾಲ್ ಸೇರಿ, ದೇಶದ ವಿವಿಧೆಡೆ ತೆರಳಬೇಕಿದ್ದ ಕೆಲ ವಿಮಾನಗಳ ಹಾರಾಟ ರದ್ದಾಗಿವೆ. ಇದರಿಂದ ಬೇರೆ ಬೇರೆ ಕಡೆ ತೆರಳಲು ಮೊದಲೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ರದ್ದಾಗಿದ್ದರಿಂದ ಇಂಡಿಗೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಇಂಡಿಗೋ ಈ ಸ್ಥಿತಿಗೆ ಕಾರಣ ಯಾರು ಎನ್ನುವ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನು ಕೆಲವರು ಕೇಂದ್ರ ಸರ್ಕಾರವೇ ಇದಕ್ಕೆ ನೇರ ಕಾರಣ ಎಂದು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟನೆ ನೀಡಿದ್ದಾರೆ.

Published on: Dec 07, 2025 06:00 PM