Mysore Dasara: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷತೆವಹಿಸಿಕೊಳ್ಳುವುದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಇಷ್ಟವಿಲ್ಲ!

Mysore Dasara: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷತೆವಹಿಸಿಕೊಳ್ಳುವುದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಇಷ್ಟವಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 23, 2023 | 12:30 PM

Mysore Dasara: ಅವರ ಮಾತಿನಿಂದ ಹೊಸ ಜವಾಬ್ದಾರಿ ಬೇಕಿಲ್ಲ ಅಥವಾ ಅದಕ್ಕೆ ಅವರು ತಯಾರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಬಿಜೆಪಿ ವರಿಷ್ಠರು, ರಾಜ್ಯ ಬಿಜೆಪಿ ಬಗ್ಗೆ ನಿರ್ಲಕ್ಷ್ಯ ಭಾವ ತಳೆದಿದ್ದು, ರಾಜ್ಯಾಧ್ಯಕ್ಷರ ಜೊತೆ ವಿರೋಧ ಪಕ್ಷದ ನಾಯಕನ ಆಯ್ಕೆಗೂ ಮುಂದಾಗುತ್ತಿಲ್ಲ.

ಮೈಸೂರು: ಬಿಜೆಪಿ ರಾಜ್ಯ ಘಟಕದ ಸಾರಥ್ಯವನ್ನು ಈ ಸಲ ಒಬ್ಬ ಮಹಿಳಾ ಧುರೀಣೆ ವಹಿಸಿಕೊಡಲಾಗಲಿದೆಯೇ? ಹಾಗೊಂದು ಸುದ್ದಿ ಹರಡಿರುವುದದು ನಿಜನಾದರೂ ಸುದ್ದಿಯ ಕೇಂದ್ರಬಿಂದುವಾಗಿರುವ ನಾಯಕಿ ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೌದು ಮಾರಾಯ್ರೇ, ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರನ್ನು (Shobha Karandlaje) ಬಿಜಪಿ ರಾಜ್ಯಾಧ್ಯಕ್ಷರನ್ನಾಗಿ (BJP state unit president) ಮಾಡುವ ಚರ್ಚೆ ನಡೆದಿದೆ. ಆದರೆ, ಇಂದು ಮೈಸೂರು ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಉಪಹಾರ ವ್ಯವಸ್ಥೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶೋಭಾ, ವಿಷಯದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ, ಕೇಂದ್ರದಲ್ಲಿ ಮಂತ್ರಿಯಾಗಿ (minister of state for Agriculture) ದೇಶದ ನಾನಾ ಭಾಗಗಳಿಗೆ ಭೇಟಿ ನೀಡುತ್ತಾ ತಾವು ಸಂತೋಷ ಹಾಗೂ ತೃಪ್ತರಾಗಿರುವುದಾಗಿ ಹೇಳಿದರು. ಅವರ ಮಾತಿನಿಂದ ಹೊಸ ಜವಾಬ್ದಾರಿ ಬೇಕಿಲ್ಲ ಅಥವಾ ಅದಕ್ಕೆ ಅವರು ತಯಾರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಬಿಜೆಪಿ ವರಿಷ್ಠರು, ರಾಜ್ಯ ಬಿಜೆಪಿ ಬಗ್ಗೆ ನಿರ್ಲಕ್ಷ್ಯ ಭಾವ ತಳೆದಿದ್ದು, ರಾಜ್ಯಾಧ್ಯಕ್ಷರ ಜೊತೆ ವಿರೋಧ ಪಕ್ಷದ ನಾಯಕನ ಆಯ್ಕೆಗೂ ಮುಂದಾಗುತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ