ಮಾಧ್ಯಮದವರು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೇನೋ ಹೇಳಿದರು!

Updated on: Apr 15, 2024 | 4:31 PM

ಅದರೆ ಪತ್ರಕರ್ತರು ಬಿಡಬೇಕಲ್ಲ? ಮೇಡಂ, ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸ್ತೀರಾ ಸ್ವಾಗತಿಸುತ್ತೀರಾ ಅಂತ ಮತ್ತೊಮ್ಮೆ ಕೇಳಿದಾಗ ಬೇರೆ ದಾರಿ ಕಾಣದ ಅವರು, ಕುಮಾರಸ್ವಾಮಿಯವರು ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ, ಅದರೆ ಅವರು ಹೇಳಿದ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸಲಾಗುತ್ತಿದೆ, ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಹಿಳೆಯರ ವಿಷಯದಲ್ಲಿ ಕೆಟ್ಟದ್ದಾಗಿ ಮಾತಾಡಿದ್ದನ್ನು ನೀವು ಖಂಡಿಸುತ್ತೀರಾ ಅಂತ ಕೇಂದ್ರ ಸಚಿವೆ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರನ್ನು (Shobha Karandlaje) ಕೇಳಿದಾಗ ಅವರು ವಿಷಯಾಂತರ ಮಾಡಿ ಬೇರೇನೋ ಹೇಳಲಾರಂಭಿಸಿದರು. ಸಿದ್ದರಾಮಯ್ಯ ಸರ್ಕಾರ ಲಕ್ಷಾಂತರ ರೂ. ಸಾಲ ಮಾಡಿ ಕೆಎಸ್ ಅರ್ ಟಿ ಸಿ (KSRTC) ಮತ್ತ ಬಿಎಂಟಿಸಿ ಸಂಸ್ಥೆಗಳನ್ನು ನಡೆಸುತ್ತಿದೆ, ಡ್ರೈವರ್, ಕಂಡಕ್ಟರ್ ಗಳಿಗೆ ಸಂಬಳ ಕೊಡುತ್ತಿಲ್ಲ, ಇವರ ಗ್ಯಾರಂಟಿ ಯೋಜನೆಗಳೇನಿದ್ದರೂ ಅದು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ, ಜನರಿಗೆ ಸುಳ್ಳುಗಳನ್ನು ಹೇಳಿ ಮೋಸ ಮಾಡುತ್ತಿದೆ ಈ ಸರ್ಕಾರ ಅನ್ನುತ್ತಾ ಹೊರಡಲಣಿಯಾಗುತ್ತಾರೆ. ಅದರೆ ಪತ್ರಕರ್ತರು ಬಿಡಬೇಕಲ್ಲ? ಮೇಡಂ, ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸ್ತೀರಾ ಸ್ವಾಗತಿಸುತ್ತೀರಾ ಅಂತ ಮತ್ತೊಮ್ಮೆ ಕೇಳಿದಾಗ ಬೇರೆ ದಾರಿ ಕಾಣದ ಅವರು, ಕುಮಾರಸ್ವಾಮಿಯವರು ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ, ಅದರೆ ಅವರು ಹೇಳಿದ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸಲಾಗುತ್ತಿದೆ, ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More