ನಂಜನಗೂಡು ತಾಲೂಕು ಹದಿನಾರು ಗ್ರಾಮಕ್ಕೆ ಶೋಭಾ ಕರಂದ್ಲಾಜೆ ಭೇಟಿ: ಅಜ್ಜಿಗೆ ಪಿಂಚಣಿ ಕೊಟ್ಟಿದ್ದು ಯಡಿಯೂರಪ್ಪ ಎಂದ ಕೇಂದ್ರ ಸಚಿವೆ

TV9kannada Web Team

TV9kannada Web Team | Edited By: Vivek Biradar

Updated on: Jan 21, 2023 | 2:33 PM

ಜನ ಸಂಕಲ್ಪ ಅಭಿಯಾನ ಹಿನ್ನೆಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದ ಮನೆಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ.

ಜನ ಸಂಕಲ್ಪ ಅಭಿಯಾನ ಹಿನ್ನೆಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದ ಮನೆಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ಈ ವೇಳೆ ಕೇಂದ್ರ ಹಾಗೂ ರಾಜ್ಯದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಹಾಗೇ ಸರ್ಕಾರದ ಸವಲತ್ತು ಸಿಕ್ಕಿರುವ ಬಗ್ಗೆ‌ ಶೋಭಾ ಕರಂದ್ಲಾಜೆ ಮಾಹಿತಿ ಪಡೆದಿದ್ದಾರೆ. ಈ ಸಮಯದಲ್ಲಿ ರಸ್ತೆ ಬದಿ ಕೂತಿದ್ದ ಅಜ್ಜಿಗೆ ಪಿಂಚಣಿ ಬರುತ್ತಾ ? ಯಾರು ಕೊಟ್ಟಿದ್ದು ? ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಅಜ್ಜಿ ಪಿಂಚಣಿ ಬರುತ್ತೆ ಎಂದು ಉತ್ತರ ನೀಡಿದ್ದಾರೆ. ಆಗ ಶೋಭಾ ಕರಂದ್ಲಾಜೆ ಪಿಂಚಣಿ ಯಡಿಯೂರಪ್ಪ ಕೊಟ್ಟಿದ್ದು ಅಂತ ಮಾಹಿತಿ ನೀಡಿದ್ದಾರೆ. ನಾವು ಬಿಜೆಪಿ ಯಡಿಯೂರಪ್ಪ ಮತ್ತು ಮೋದಿ ಪಕ್ಷದಿಂದ ಬಂದಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Follow us on

Click on your DTH Provider to Add TV9 Kannada